ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಗಲ್ಫ್ ರಾಷ್ಟ್ರಗಳ ಉದ್ಯೋಗಾವಕಾಶಕ್ಕೆ ಸರಕಾರದ ನೇರವು
ಗಲ್ಫ್ ರಾಷ್ಟ್ರಗಳಲ್ಲಿ ಇರುವ ಉದ್ಯೋಗಾವಕಾಶಗಳನ್ನು ತನ್ನ ದೇಶದ ನಾಗರಿಕರಿಗೆ ದೊರೆಯುವಂತೆ ಮಾಡಲು ಭಾರತ ಸರಕಾರ ಮುಂದಾಗಿದ್ದು ಈ ನಿಟ್ಟಿನಲ್ಲಿ ಭಾರತೀಯ ಸರಕಾರವು ಅದ್ಯಯನ ಸಮಿತಿಯೊಂದನ್ನು ಸ್ಥಾಪಿಸಿ, ಭವಿಷ್ಯತ್ತಿನ ದಿನಗಳಲ್ಲಿ ಗಲ್ಫ್ ದೇಶಗಳಲ್ಲಿ ಇರುವ ಉದ್ಯೋಗಾವಕಾಶಗಳ ಕುರಿತು ವರದಿ ನೀಡಲಿದೆ.

ಬಹ್ರೆನ್ ಪ್ರವಾಸದಲ್ಲಿರುವ ಕೇಂದ್ರ ಸಚಿವ ವಯಲಾರ್ ರವಿ ಅವರು, ಕೇಂದ್ರ ಸಚಿವ ಸಂಪುಟ ಅದ್ಯಯನ ಸಮಿತಿಯ ಸ್ಥಾಪನೆ ಕುರಿತು ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿ ಸಮಿತಿಯ ಸದಸ್ಯರ ನೇಮಕ ಮಾಡಲಾಗುವುದು. ಸಮಿತಿಯಲ್ಲಿ ಎಲ್ಲ ಗಲ್ಫ್ ದೇಶಗಳ ಭಾರತೀಯ ರಾಯಭಾರಿಗಳು ಇರಲಿದ್ದಾರೆ. ಸಮಿತಿಯ ಗಲ್ಫ್ ದೇಶಗಳಲ್ಲಿ ಇರುವ ಭಾರತೀಯ ಮೂಲದ ಪರಿಸ್ಥಿತಿ, ಮತ್ತು ತಾಂತ್ರಿಕ ಕೌಶಲ್ಯ ಇರುವ ಭಾರತೀಯ ಮಾನವ ಸಂಪನ್ಮೂಲಕ್ಕೆ ಇಲ್ಲಿ ಸಿಗುವ ಅವಕಾಶಗಳ ಕುರಿತು ಅದ್ಯಯನ ನಡೆಸಲಾಗುವುದು.

ಗಲ್ಫ್ ದೇಶಗಳಲ್ಲಿ ಬೇಡಿಕೆ ಇರುವ ತಾಂತ್ರಿಕ ಜ್ಞಾನವನ್ನು ವೃತ್ತಿ ತರಬೇತಿಗಳ ಮೂಲಕ ಭಾರತೀಯರಿಗೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಂದಾಜು 5 ಮಿಲಿಯನ್ ಭಾರತೀಯರು ಗಲ್ಪ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರತಿವರ್ಷ ಸುಮಾರು 5 ಬಿಲಿಯನ್ ಡಾಲರ್‌ಗಳನ್ನು ಭಾರತಕ್ಕೆ ಕಳುಹಿಸಿಕೊಡುತ್ತಿದ್ದಾರೆ.

ಭಾರತದ ಆರ್ಥಿಕಾಭಿವೃದ್ದಿ ಪ್ರತಿವರ್ಷ ಪ್ರತಿಶತ 9ರಷ್ಟು ದಾಖಲಾಗುತ್ತಿದ್ದು, ಅತ್ಯುತ್ತಮ ಸಂಬಳ ಮತ್ತು ಅನುಕೂಲಕರ ವಾತಾವರಣವನ್ನು ಕಲ್ಪಿಸಿಕೊಟ್ಟರೆ ಮಾತ್ರ ಗಲ್ಫ್ ದೇಶಗಳ ಕಂಪನಿಗಳು ಭಾರತದಿಂದ ಪರಿಣತ ಮಾನವ ಸಂಪನ್ಮೂಲವನ್ನು ಪಡೆಯಲು ಸಾದ್ಯ ಎಂದು ಹೇಳಿದ್ದಾರೆ.
ಮತ್ತಷ್ಟು
ಬಾಂಬ್ ಸ್ಫೋಟ: ಕಸಾಯಿಖಾನೆಯಾದ ಕರಾಚಿ
ಕರಾಚಿ ಸ್ಫೋಟ: ಭಾರತ ಖಂಡನೆ
ಮುಗ್ಧರ ಹತ್ಯೆಗೆ ಸಮರ್ಥನೆಯಿಲ್ಲ:ಅಮೆರಿಕ
ಬುಷ್‌ರ ತೃತೀಯ ಮಹಾಯುದ್ಧ ಕೇವಲ ಕಲ್ಪನೆ
ಅಲ್‌ ಖಾಯಿದಾ ಕೈವಾಡ: ಹವಾರ್ಡ್ ಆರೋಪ
ಬಾಂಬ್ ಸ್ಫೋಟ:ಭುಟ್ಟೋ ಪಾರು