ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಲೂಸಿಯಾನದ ಗವರ್ನರ್ ಬಾಬಿ ಜಿಂಡಾಲ್
ಆಕ್ಸ್‌ಫರ್ಡ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಭಾರತೀಯ ಸಂಜಾತ ಅಮೆರಿಕದ ಬಾಬಿ ಜಿಂಡಾಲ್ ಶನಿವಾರ ನಡೆದ ಚುನಾವಣೆಯಲ್ಲಿ ಜಯಗಳಿಸುವ ಮೂಲಕ 1870ರಿಂದೀಚೆಗೆ ಲೂಸಿಯಾನದ ಪ್ರಥಮ ಬಿಳಿಯೇತರ ಗವರ್ನರ್ ಎನಿಸಿದ್ದಾರೆ.

36 ವರ್ಷ ವಯಸ್ಸಿನ ಜಿಂಡಾಲ್ ಶೇ.53 ಮತಗಳನ್ನು ಗಳಿಸಿದರೆ ಅವರ ಸಮೀಪದ ಸ್ಪರ್ಧಿ ಶೇ. 17 ಮತಗಳನ್ನು ಗಳಿಸಿದರು. ಅವರು ಅಮೆರಿಕದ ಅತೀ ಕಿರಿಯ ಗವರ್ನರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಲೂವಿಸಿಯಾನ ಮುಕ್ತ ಪ್ರೈಮರಿ ವ್ಯವಸ್ಥೆಯ ಪ್ರಕಾರ ಎಲ್ಲ ಅಭ್ಯರ್ಥಿಗಳು ಪಕ್ಷಬೇಧವಿಲ್ಲದೇ ಪರಸ್ಪರ ಸ್ಪರ್ಧಿಸಿದ್ದರು. ಜಿಂಡಾಲ್ ಅವರು 2003ರಲ್ಲಿ ಶೇ.48 ಮತಗಳನ್ನು ಗಳಿಸಿ ಕಾಥಲೀನ್ ಬ್ಲಾಂಕೊಗೆ ಸೋಲಪ್ಪಿದ್ದರು.

2005ರಲ್ಲಿ ಚಂಡಮಾರುತ ಕತ್ರಿನಾ ಪ್ರಕೋಪವನ್ನು ಸೂಕ್ತ ಪ್ರತಿಕ್ರಿಯೆ ನೀಡದ ಬ್ಲಾಂಕೊ ತೀವ್ರ ಟೀಕೆಗೆ ಒಳಗಾದ್ದರಿಂದ ತಮ್ಮ ಪುನರಾಯ್ಕೆ ಪ್ರಯತ್ನವನ್ನು ಬ್ಲಾಂಕೊ ಕೈಬಿಟ್ಟಿದ್ದರು.
ಮತ್ತಷ್ಟು
ಗಲ್ಫ್ ರಾಷ್ಟ್ರಗಳ ಉದ್ಯೋಗಾವಕಾಶಕ್ಕೆ ಸರಕಾರದ ನೇರವು
ಬಾಂಬ್ ಸ್ಫೋಟ: ಕಸಾಯಿಖಾನೆಯಾದ ಕರಾಚಿ
ಕರಾಚಿ ಸ್ಫೋಟ: ಭಾರತ ಖಂಡನೆ
ಮುಗ್ಧರ ಹತ್ಯೆಗೆ ಸಮರ್ಥನೆಯಿಲ್ಲ:ಅಮೆರಿಕ
ಬುಷ್‌ರ ತೃತೀಯ ಮಹಾಯುದ್ಧ ಕೇವಲ ಕಲ್ಪನೆ
ಅಲ್‌ ಖಾಯಿದಾ ಕೈವಾಡ: ಹವಾರ್ಡ್ ಆರೋಪ