ಪಾಕಿಸ್ತಾನವನ್ನು ಮುನ್ನಡೆಸಲು ಅಧ್ಯಕ್ಷ ಪರ್ವೇಜ್ ಮುಷರಫ್‌ಗಿಂತ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಸಮರ್ಥ ವ್ಯಕ್ತಿಯಾಗಿದ್ದಾರೆ ಎಂಬುದಾಗಿ ನೂತನ ಸಮೀಕ್ಷೆಯೊಂದು ತಿಳಿಸಿದೆ.
ಮೂರನೇ ಅವಧಿಯಲ್ಲಿ ಪ್ರಧಾನಮಂತ್ರಿಯಾಗಿ ಆಯ್ಕೆಯಾಗುವ ನಿರೀಕ್ಷೆಯೊಂದಿಗೆ ಭುಟ್ಟೋ ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂಬುದಾಗಿ ಐವತ್ತು ಪ್ರತಿಶತ ಪಾಕಿಸ್ತಾನೀಯರು ಒಪ್ಪಿಕೊಂಡಿದ್ದಾರೆ.
ಎಸಿ ನೀಲ್ಸನ್ ಪಾಕಿಸ್ತಾನ್ ದೇಶದ ನಗರ ಪ್ರದೇಶದಲ್ಲಿ ಈ ಕುರಿತಾದ ಚುನಾವಣೆಯನ್ನು ನಡೆಸಿದ್ದು, ಮೂರರಲ್ಲಿ ಒಬ್ಬ ಪ್ರತಿವಾದಿಯು ಭುಟ್ಟೋ ದೇಶಕ್ಕೆ ಮರಳುವುದನ್ನು ವಿರೋಧಿಸುತ್ತಿದ್ದರು ಎಂಬುದಾಗಿ ಕಂಡುಕೊಂಡಿದೆ.
ಪಾಕಿಸ್ತಾನವನ್ನು ಮುಂದುವರಿಸಲು ಯಾರು ಸೂಕ್ತ ವ್ಯಕ್ತಿ ಎಂಬ ಪ್ರಶ್ನೆಗೆ ಶೇ. 27 ಮಂದಿ ಭುಟ್ಟೋ ಪರವಾಗಿದ್ದು, ಶೇ. 21 ಮಂದಿ ಮುಷರಫ್ ಪರವಾಗಿದ್ದಾರೆ.
ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಕೂಡಾ ಪಾಕಿಸ್ತಾನವನ್ನು ಆಳಲು ಸೂಕ್ತ ವ್ಯಕ್ತಿ ಎಂದು ಶೇ. 21 ಜನರು ಅಭಿಪ್ರಾಯಪಟ್ಟಿದ್ದಾರೆ.
ಈ ಚುನಾವಣೆಯನ್ನು ದೇಶದ 19 ನಗರಗಳಲ್ಲಿ ಮುಖಾಮುಖಿ ಸಂದರ್ಶನದ ಮೂಲಕ ನಡೆಸಲಾಗಿತ್ತು.
|