ಜಾಗತಿಕ ತಾಪಮಾನ ಕುರಿತಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಮಂಡಿಸುತ್ತಿರುವ ವಾದ, ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ನಿಯಂತ್ರಣ ಸಾಧಿಸುವ ತಂತ್ರವಲ್ಲ. ಇಂದು ಆಗುತ್ತಿರುವ ವಾತಾವರಣ ಬದಲಾವಣೆ ತೃತೀಯ ರಾಷ್ಟ್ರಗಳ ಆರ್ಥಿಕಾಭಿವೃದ್ದಿಯ ಮೇಲೆ ಖಂಡಿತವಾಗಿ ಪರಿಣಾಮ ಬೀರಬಹುದಾಗಿದೆ ಎಂದು ಸಂಯುಕ್ತ ರಾಷ್ಟ್ರ ಸಂಘದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹವಾಮಾನ ಬದಲಾವಣೆ ಎಂಬುದು ಪಾಶ್ಚಮಾತ್ಯ ದೇಶಗಳ ದುಬಾರಿ ವಿಷಯವಾಗಿದೆ ಮತ್ತು ಆ ಸಮಸ್ಯೆಯನ್ನು ಪಶ್ಚಿಮ ದೇಶಗಳೇ ಬಗೆಹರಿಸಬೇಕು ಎಂಬುದಾಗಿ ಅನೇಕ ವರ್ಷಗಳಿಂದ ತಿಳಿದುಕೊಂಡಿವೆ.ಆದರೆ ಈ ಬದಲಾವಣೆಯು ಈಗಾಗಲೇ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಪರಿಣಾಮವನ್ನು ಬೀರುತ್ತಿವೆ. ಹವಾಮಾನ ಬದಲಾಣೆಯು ಅಭಿವೃದ್ಧಿಯ ಬೆದರಿಕೆಯಾಗಿದ್ದು, ಕಡೆಗಣಿಸುವ ವಿಷಯವಲ್ಲ ಎಂದು ಹವಾಮಾನ ಬದಲಾವಣೆಯ ಯುಎನ್ ಫ್ರೇಮ್‌ವರ್ಕ್ ಕನ್ವೆಂಶನ್‌ನ ಕಾರ್ಯನಿರ್ವಾಹಕ ಕಾರ್ಯದರ್ಶಿ ಯೋ ಡಿ ಬೋರ್ ತಿಳಸಿದ್ದಾರೆ.
ಈ ಸಂಪೂರ್ಣ ವಿಷಯವನ್ನು ಪರಿಸರ ಸವಾಲನ್ನಾಗಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಸವಾಲಾಗಿ ಪರಿಗಣಿಸದೆ, ಆರ್ಥಿಕ ಅಭಿವೃದ್ಧಿಯನ್ನು ನಿಭಾಯಿಸುವ ಸವಾಲಾಗಿದೆ ಎಂಬುದಾಗಿ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದು, ವಿಶ್ವದ ಆರ್ಥಿಕತೆಯು ಬೆಳೆಯುತ್ತಿದ್ದು, ಮುಂದಿನ 25 ವರ್ಷಗಳಲ್ಲಿ ಇಂಧನ ಸಂಪನ್ಮೂಲಗಳಿಗೆ 20 ಶತಕೋಟಿ ಡಾಲರ್ ಬಂಡವಾಳ ಹೂಡಬೇಕಾಗಿದೆ ಒಂದು ವೇಳೆ ಸರಿಯಾದ ರೀತಿಯಲ್ಲಿ ಬಂಡವಾಳ ಹೂಡದಿದ್ದಲ್ಲಿ, ಅದು ಶೇ.50ರಷ್ಟು ಹಸಿರುಮನೆ ಅನಿಲ ಮಾಲಿನ್ಯವನ್ನು ಹೆಚ್ಚುಗೊಳಿಸಲಿದೆ ಎಂದು ಹೇಳಿದರು.
ಹಿಮಾಲಯದಲ್ಲಿ ಹಿಮಗಡ್ಡೆಗಳು ಕರಗುತ್ತಿದ್ದು, ಚೀನಾ ಮತ್ತು ಭಾರತ ಉಪ ಪ್ರಾಂತ್ಯದ ಮೇಲೆ ಪ್ರಭಾವ ಬೀರುತ್ತಿದೆ.ಇದರಿಂದಾಗಿ ಈಗಾಗಲೇ ಭಾರತದಲ್ಲಿ ನೆರೆಯ ಪ್ರಮಾಣ ಹೆಚ್ಚಾಗಿದೆ ಎಂದು ಯುಎನ್ ಅಧಿಕಾರಿಗಳು ತಿಳಿಸಿದ್ದಾರೆ.
|