ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಪಾಕ್ ಅತ್ಯಂತ ಅಪಾಯಕಾರಿ ಸ್ಥಳ
ತಾಲಿಬಾನ್ ಪರ ಅಲ್ ಕೈದಾ ಉಗ್ರಗಾಮಿಗಳಿಂದ ಸರಣಿ ಆತ್ಮಹತ್ಯೆ ದಾಳಿಗಳನ್ನು ಇತ್ತೀಚೆಗೆ ಕಂಡ ಪಾಕಿಸ್ತಾನ ವಿಶ್ವದಲ್ಲೇ ಅತ್ಯಂತ ಅಪಾಯಕಾರಿಯಾದ ಸ್ಥಳವಾಗಿದ್ದು, ಭಯೋತ್ಪಾದಕರಿದೆ ಸುರಕ್ಷಿತ ತಾಣವಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಅಲ್ ಕೈದಾ ಮುಖಂಡ ಒಸಾಮಾ ಬಿನ್ ಲಾಡೆನ್‌ ಕೇಳಿದ್ದೆಲ್ಲವೂ ಅಲ್ಲಿ ಸಿಗುತ್ತದೆ. ರಾಜಕೀಯ ಅಸ್ಥಿರತೆ, ಮೂಲಭೂತವಾದಿ ಇಸ್ಲಾಮಿಗಳ ನಂಬಿಕಸ್ಥ ಜಾಲ, ಏಕಾಂತ ತರಬೇತಿ ಪ್ರದೇಶಗಳು ಮತ್ತು ಮಾಡಬೇಕಾದ್ದನ್ನು ಮಾಡದ ಭದ್ರತಾ ಸೇವೆ ಎಲ್ಲವೂ ಸಿಗುತ್ತದೆ ಎಂದು ನ್ಯೂಸ್‌ವೀಕ್ ತನಿಖಾ ವರದಿಯಲ್ಲಿ ತಿಳಿಸಿದೆ.

ಬಳಿಕ ರಾಷ್ಟ್ರದ ದೊಡ್ಡ, ಬೆಳವಣಿಗೆ ಹೊಂದುತ್ತಿರುವ ಪರಮಾಣು ಕಾರ್ಯಕ್ರಮ. ಪಾಕಿಸ್ತಾನ ಅಸ್ಥಿರ ಪರಮಾಣು ಶಕ್ತಿ ರಾಷ್ಟ್ರವಾಗಿದ್ದು,ಭಯೋತ್ಪಾದಕರ ಕೈಯಲ್ಲಿ ದೂರದ ಬುಡಕಟ್ಟು ಪ್ರದೇಶಗಳಿವೆ ಎನ್ನುವುದು ರೂಢಿಗತ ಮಾತಾಗಿದೆ ಎಂದು ಪತ್ರಿಕೆ ತಿಳಿಸಿದೆ.

ತಾಲಿಬಾನ್ ಮತ್ತು ಅಲ್ ಕೈದಾ ಶಕ್ತಿಗಳು ರಾಷ್ಟ್ರದ ಕೆಲವು ನಗರಗಳು ಸೇರಿದಂತೆ ಬಹುತೇಕ ಭಾಗವನ್ನು ನೆಲೆಯಾಗಿ ಮಾಡಿಕೊಂಡು ಉಗ್ರಗಾಮಿಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಿರುವ ಪ್ರಮಾಣ ಭಯಾನಕವಾಗಿದೆ ಎಂದು ಪತ್ರಿಕೆ ತಿಳಿಸಿದೆ.

ತಾಲಿಬಾನ್ ಉಗ್ರರು ಇಷ್ಟಬಂದ ಹಾಗೆ ರಾಷ್ಟ್ರದೊಳಗೆ ಪ್ರವೇಶಿಸಿ, ತೆರಳುತ್ತಿದ್ದಾರೆ. ತಾಲಿಬಾನ್ ಗಾಯಾಳುಗಳು ಅಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂದೂಕುಗಳು ಪಾಕ್‌ನಲ್ಲಿ ಕೇಳಿದಕೂಡಲೇ ಲಭ್ಯವಿದ್ದು, ಚಳಿಗಾಲದಲ್ಲಿ ಆಫ್ಘಾನಿಸ್ತಾನದ ಹೋರಾಟ ಸ್ತಬ್ಧವಾದ ಕೂಡಲೇ ಸಾವಿರಾರು ಉಗ್ರರು ಪಾಕ್‌ನ ಮದ್ರಸಾಗಳಲ್ಲಿ ಕುರಾನ್ ಅಧ್ಯಯನಕ್ಕೆ ಆಗಮಿಸುತ್ತಾರೆಂದು ಪತ್ರಿಕೆ ತಿಳಿಸಿದೆ.
ಮತ್ತಷ್ಟು
ವಾತಾವರಣ ಬದಲಾವಣೆ ರಾಜಕೀಯವಲ್ಲ: ಯುಎನ್
ಪಾಕಿಸ್ತಾನ ಮುನ್ನಡೆಗೆ ಭುಟ್ಟೋ ಸೂಕ್ತ ವ್ಯಕ್ತಿ:ಸಮೀಕ್ಷೆ
ಸರ್ಕಾರದ ಮೇಲೆ ಪಿಪಿಪಿ ಒತ್ತಡ
ಲೂಸಿಯಾನದ ಗವರ್ನರ್ ಬಾಬಿ ಜಿಂಡಾಲ್
ಗಲ್ಫ್ ರಾಷ್ಟ್ರಗಳ ಉದ್ಯೋಗಾವಕಾಶಕ್ಕೆ ಸರಕಾರದ ನೇರವು
ಬಾಂಬ್ ಸ್ಫೋಟ: ಕಸಾಯಿಖಾನೆಯಾದ ಕರಾಚಿ