ಚೀನದ ಅಧ್ಯಕ್ಷ ಹು ಜಿಂಟಾವೊ ಚೀನದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಪ್ರಧಾನಕಾರ್ಯದರ್ಶಿಯಾಗಿ 2012ರವರೆಗೆ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಸೋಮವಾರ ಬೆಳಿಗ್ಗೆ ನಡೆದ ಮೊದಲ ಸಭೆಯಲ್ಲಿ ಸಿಪಿಸಿಯ 17ನೇ ಕೇಂದ್ರ ಸಮಿತಿಯಿಂದ ಅವರು ಹೊಸ ಜನಾದೇಶದಲ್ಲಿ ವಿಜಯಿಯಾದರು.
64 ವರ್ಷ ವಯಸ್ಸಿನ ಹು ಪ್ರಸಕ್ತ ರಾಷ್ಟ್ರದ ಮುಖ್ಯಸ್ಥ, ಪಕ್ಷದ ಮುಖ್ಯಸ್ಥ ಮತ್ತು ಪೀಪಲ್ಸ್ ಲಿಬರೇಷನ್ ಆರ್ಮಿಯ ದಂಡನಾಯಕ ಸ್ಥಾನವನ್ನು ಅಲಂಕರಿಸಿದ್ದಾರೆ. ಹು ಜಿಂಟಾವೊ ಸೇರಿದಂತೆ ಇನ್ 8 ಜನರು ನೂತವಾಗಿ ಆಯ್ಕೆಯಾದ ಸಿಪಿಸಿ ಕೇಂದ್ರ ಸಮಿತಿಯ ಸದಸ್ಯರಾಗಿದ್ದಾರೆ.
ಚೀನದ ಹೊಸ ನಾಯಕರ ತಂಡವನ್ನು ವೀಕ್ಷಿಸಲು ಆರ್ನೇಟ್ ಗ್ರೇಟ್ ಹಾಲ್‌ನಲ್ಲಿ ನಸುಕಿನಿಂದ ಕಾಯುತ್ತಿದ್ದ ಮಾಧ್ಯಮಕ್ಕೆ ಹು ತಮ್ಮ ಹಳೆಯ ಮತ್ತು ಹೊಸ ಸಹೋದ್ಯೋಗಿಗಳನ್ನು ಪರಿಚಯಿಸಿದರು.
|