ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ವಾಯುನೆಲೆ ಮೇಲೆ ದಾಳಿ: ಐವರ ಹತ್ಯೆ
ಉತ್ತರ ಮಧ್ಯ ಅನುರಾಧಾಪುರ ಜಿಲ್ಲೆಯಲ್ಲಿ ಸೋಮವಾರ ಶ್ರೀಲಂಕಾದ ವಾಯುನೆಲೆ ಮೇಲೆ ತಮಿಳು ವ್ಯಾಘ್ರ ಬಂಡುಕೋರರು ನಸುಕಿನಲ್ಲೇ ದಾಳಿ ನಡೆಸಿದ್ದರಿಂದ ಶ್ರೀಲಂಕಾ ವಾಯುಪಡೆಯ ಕನಿಷ್ಠ ಐವರು ಸಿಬ್ಬಂದಿ ಸತ್ತಿದ್ದಾರೆ ಮತ್ತು ಎರಡು ಎಂಐ-24 ಹೆಲಿಕಾಪ್ಟರ್‌ಗಳು ಹಾನಿಗೀಡಾಗಿವೆ.

ತೆರವು ಕಾರ್ಯಾಚರಣೆಯಲ್ಲಿ ನಿರತವಾದ ಪಡೆಗಳಿಗೆ ನೆರವು ನೀಡಲು ಪೊಲೀಸರು ಅನುರಾಧಪುರ ಮತ್ತು ಮಿಂಟಾಲೆ ನಗರಗಳಲ್ಲಿ ಸ್ಥಳೀಯ ಕರ್ಫ್ಯೂ ಘೋಷಿಸಿದ್ದಾರೆ. ಮೊದಲಿಗೆ ಎಲ್‌ಟಿಟಿಇ ಪಡೆ ಅನುರಾಧಪುರ ಎಸ್‌ಎಲ್ಎಫ್‌ ನೆಲೆಗೆ ನುಸುಳಿ ನಸುಕಿನಲ್ಲಿ 3.20ಕ್ಕೆ ಆರಂಭಿಕದಾಳಿ ನಡೆಸಿತು.

ಕೆಲವು ನಿಮಿಷಗಳಾದ ಬಳಿಕ ಕನಿಷ್ಠ ಎರಡು ಎಲ್‌ಟಿಟಿಇ ಹಗುರ ವಿಮಾನಗಳು ನೆಲೆಯ ಮೇಲೆ ವಾಯುದಾಳಿ ನಡೆಸಿ ಎರಡು ಎಂಐ-24 ಹೆಲಿಕಾಪ್ಟರ್‌ಗಳನ್ನು ನಾಶ ಮಾಡಿತು ಎಂದು ಮಿಲಿಟರಿ ವಕ್ತಾರ ಬ್ರಿ.ಉದಯ ನಯಂಕಾರಾ ಸುದ್ದಿಸಂಸ್ಥೆಗೆ ತಿಳಿಸಿದರು.

ಉತ್ತರವಾಯುನಿಯ ಕಡೆಯಿಂದ ಆಗಮಿಸಿದೆಯೆಂದು ಹೇಳಲಾದ ಎಲ್‌ಟಿಟಿಇ ವಿಮಾನ ವಾಯುಪಡೆ ನೆಲೆ ಮೇಲೆ ಕನಿಷ್ಠ ಎರಡು ಬಾಂಬ್‌ಗಳನ್ನು ಉದುರಿಸಿ ಸ್ಥಳದಿಂದ ಪಲಾಯನ ಮಾಡಿತು ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು
ಹು ಜಿಂಟಾವೊ ಕಮ್ಯೂನಿಸ್ಟ್ ಪ್ರ.ಕಾರ್ಯದರ್ಶಿ
ಮಧ್ಯಂತರ ಚುನಾವಣೆ: ಪ್ರಮುಖ ಹುದ್ದೆಗಳಿಗೆ ಭುಟ್ಟೋ ಚಿಂತನೆ
ಪಾಕ್ ಅತ್ಯಂತ ಅಪಾಯಕಾರಿ ಸ್ಥಳ
ವಾತಾವರಣ ಬದಲಾವಣೆ ರಾಜಕೀಯವಲ್ಲ: ಯುಎನ್
ಪಾಕಿಸ್ತಾನ ಮುನ್ನಡೆಗೆ ಭುಟ್ಟೋ ಸೂಕ್ತ ವ್ಯಕ್ತಿ:ಸಮೀಕ್ಷೆ
ಸರ್ಕಾರದ ಮೇಲೆ ಪಿಪಿಪಿ ಒತ್ತಡ