ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಆತ್ಮಹತ್ಯೆ ದಾಳಿಗೆ ಬೇನಜೀರ್ ಹೊಣೆ:ಇಮ್ರಾನ್
ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಬೆಂಗಾವಲು ಪಡೆ ಮೇಲೆ ಆತ್ಮಹತ್ಯೆ ದಾಳಿಗೆ ಭುಟ್ಟೊ ಸ್ವತಃ ತಮ್ಮನ್ನೇ ದೂಷಿಸಿಕೊಳ್ಳಬೇಕು ಎಂದು ರಾಜಕಾರಣಿಯಾಗಿ ಪರಿವರ್ತನೆಯಾದ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ತಿಳಿಸಿದ್ದಾರೆ. ಅಧ್ಯಕ್ಷ ಮುಷರ್ರಫ್ ಜತೆ ಬೇನಜೀರ್ ಒಪ್ಪಂದದಿಂದ ಆತ್ಮಹತ್ಯೆ ದಾಳಿಗಳಿಗೆ ಅವರನ್ನು ಗುರಿ ಮಾಡಿತು ಎಂದು ಇಮ್ರಾನ್ ಹೇಳಿದ್ದಾರೆ.

ಸಂಡೇ ಟೆಲಿಗ್ರಾಫ್ ಪತ್ರಿಕೆಗೆ ಈ ಕುರಿತು ಬರೆದಿರುವ ಅವರು, ಮುಳುಗುತ್ತಿದ್ದ, ಏಕಾಂಗಿ ಜನರಲ್ ಅವರಿಗೆ ಆಸರೆಯಾಗುವ ಮೂಲಕ ರಾಷ್ಟ್ರದ ಪ್ರಜಾತಂತ್ರ ಪ್ರಕ್ರಿಯೆಯನ್ನು ಭುಟ್ಟೊ ಧ್ವಂಸ ಮಾಡಿದರೆಂದು ಅವರು ಆಪಾದಿಸಿದ್ದಾರೆ.

ತಾರೀಖ್‌-ಎ-ಇನ್ಸಾಫ್ ಪಕ್ಷದ ನಾಯಕರಾದ ಖಾನ್, 140 ಜನರನ್ನು ಬಲಿತೆಗೆದುಕೊಂಡ ಆತ್ಮಹತ್ಯಾದಾಳಿಯು ಅನಿವಾರ್ಯ ದುರಂತವಾಗಿದೆ ಎಂದು ಹೇಳಿದ್ದಾರೆ. 8 ವರ್ಷಗಳ ಬಳಿಕ ರಾಷ್ಟ್ರಕ್ಕೆ ಹಿಂತಿರುಗಿದ ಬೇನಜೀರ್ ಸ್ವಾಗತಕ್ಕೆ ಬಾರೀ ಜನಸ್ತೋಮ ಸೇರುತ್ತದೆಂದು ಪ್ರತಿಯೊಬ್ಬರಿಗೂ ಗೊತ್ತಿತ್ತು.

ಇಂತಹ ಜನಸ್ತೋಮದಲ್ಲಿ ಆತ್ಮಹತ್ಯೆ ಬಾಂಬರ್‌ಗಳು ನುಸುಳದಂತೆ ಎಚ್ಚರವಹಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. ಬೇನಜೀರ್ ಅವರು ಮುಷರ್ರಫ್ ಸರ್ಕಾರದ ಜತೆ, ಬ್ರಿಟನ್ ಮತ್ತು ಅಮೆರಿಕ ಮಧ್ಯಸ್ಥಿಕೆಯ ಒಪ್ಪಂದದ ಮೂಲಕ ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪಗಳಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರೆಂದು ಅವರು ಆರೋಪಿಸಿದರು.
ಮತ್ತಷ್ಟು
ವಾಯುನೆಲೆ ಮೇಲೆ ದಾಳಿ: ಐವರ ಹತ್ಯೆ
ಹು ಜಿಂಟಾವೊ ಕಮ್ಯೂನಿಸ್ಟ್ ಪ್ರ.ಕಾರ್ಯದರ್ಶಿ
ಮಧ್ಯಂತರ ಚುನಾವಣೆ: ಪ್ರಮುಖ ಹುದ್ದೆಗಳಿಗೆ ಭುಟ್ಟೋ ಚಿಂತನೆ
ಪಾಕ್ ಅತ್ಯಂತ ಅಪಾಯಕಾರಿ ಸ್ಥಳ
ವಾತಾವರಣ ಬದಲಾವಣೆ ರಾಜಕೀಯವಲ್ಲ: ಯುಎನ್
ಪಾಕಿಸ್ತಾನ ಮುನ್ನಡೆಗೆ ಭುಟ್ಟೋ ಸೂಕ್ತ ವ್ಯಕ್ತಿ:ಸಮೀಕ್ಷೆ