ತಾವು ಪಾಕಿಸ್ತಾನಕ್ಕೆ ಹಿಂತಿರುಗುವ ಮುಂಚೆಯೇ ತಮ್ಮ ಹತ್ಯೆಗೆ ನಾಲ್ಕು ಆತ್ಮಹತ್ಯೆ ದಳಗಳನ್ನು ಕಳಿಸಲಾಗಿರುವ ಬಗ್ಗೆ ಅಧ್ಯಕ್ಷ ಮುಷರ್ರಫ್ ಎಚ್ಚರಿಸಿದ್ದರು ಎಂದು ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ತಿಳಿಸಿದರು. ತಮ್ಮ ಹತ್ಯೆ ಪ್ರಯತ್ನಗಳಲ್ಲಿ ಹಿಂದಿನ ಮಿಲಿಟರಿ ಸರ್ವಾಧಿಕಾರಿ ಜಿಯಾ ಉಲ್ ಹಕ್ ಜತೆ ಸಖ್ಯವಿದ್ದ ಮೂವರು ಹಿರಿಯ ಅಧಿಕಾರಿಗಳು ಮತ್ತು ಕೆಲವು ಶಕ್ತಿಗಳ ಕೈವಾಡವಿದೆ ಎಂದು ಭುಟ್ಟೊ ಹೇಳಿದರು.
ಕರಾಚಿಯಲ್ಲಿ ಅವರ ಬೆಂಗಾವಲು ವಾಹನಗಳು ಸಾಗುತ್ತಿದ್ದಂತೆ ಆತ್ಮಹತ್ಯೆ ಬಾಂಬರ್ ಬೆದರಿಕೆ ಬಗ್ಗೆ ಅವರು ಚಿಂತಿತರಾಗಿದ್ದರೇ ಎಂಬ ಪ್ರಶ್ನೆಗೆ, "ಹೌದು,ನನಗೆ ಎಚ್ಚರಿಸಲಾಗಿತ್ತು. ತಮ್ಮ ವಾಪಸಾತಿಯನ್ನು ತಡಮಾಡುವಂತೆ ಮುಷರ್ರಫ್ ಎಚ್ಚರಿಸಿದ್ದರು.
ನಾಲ್ಕು ಆತ್ಮಹತ್ಯೆ ದಳಗಳನ್ನು ತಮ್ಮ ಹತ್ಯೆ ಸಲುವಾಗಿ ಕಳಿಸಿರುವ ಬಗ್ಗೆ ಸಿಕ್ಕಿದ ಮಾಹಿತಿಯನ್ನು ತಮ್ಮ ಜತೆ ಹಂಚಿಕೊಂಡಿದ್ದರು" ಎಂದು ಭುಟ್ಟೊ ಎನ್‌ಬಿಸಿ ಟಿವಿಗೆ ತಿಳಿಸಿದರು. ಆದರೆ ಪಾಕ್‌ಗೆ ವಾಪಸಾತಿಯನ್ನು ಮುಂದೂಡಬೇಕೆಂದು ಮುಷರ್ರಫ್ ಮತ್ತು ಪ್ರಧಾನಮಂತ್ರಿ ಶೌಕತ್ ಅಜೀಜ್ ಇಬ್ಬರೂ ಕೋರಿದ್ದರೂ ಅವರು ಭುಟ್ಟೊ ಅವರ ಸಲಹೆಯನ್ನು ತಿರಸ್ಕರಿಸಿದ್ದರು.
|