ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಕಲಾಂಗೆ ಕಿಂಗ್ ಚಾರ್ಲ್ಸ್ 2 ಪ್ರಶಸ್ತಿ
ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಆಜಾದ್ ವೈಜ್ಞಾನಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇಂಗ್ಲೆಂಡ್‌ನ ಉನ್ನತ ಕಿಂಗ್ ಚಾರ್ಲ್ಸ್2 ಪದಕ ನೀಡಿ ಲಂಡನ್‌ನಲ್ಲಿ ಗೌರವಿಸಲಾಯಿತು.

ರಾಯಲ್ ಸೂಸೈಟಿ ಅಧ್ಯಕ್ಷರಾದ ಲಾರ್ಡ್ ಮಾರ್ಟಿನ್, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಪದಕ ನೀಡಿ ಗೌರವಿಸಿದರು. ಸಭೆಯಲ್ಲಿ ಭಾರತೀಯ ಸಂಜಾತ ಉದ್ಯಮಿ ಲಾರ್ಡ್ ಸ್ನರಾಜ್ ಪೌಲ್, ಕೊಬ್ರಾ ಬೀಯರ್ ಮುಖ್ಯಸ್ಥ ಲಾರ್ಡ್ ಕರಣ್ ಬಿಲ್ಲಿಮೊರಿಯಾ, ಇಂಗ್ಲೆಂಡ್‌ನ ಭಾರತೀಯ ರಾಯಭಾರಿ ಅಶೋಕ್ ಮುಖರ್ಜಿ, ಖ್ಯಾತ ಅರ್ಥಶಾಸ್ತ್ರಜ್ಞ ಲಾರ್ಡ್ ಮೆಘನಾದ್ ದೇಸಾಯಿ ಅವರುಗಳು ಉಪಸ್ಥಿತರಿದ್ದರು.

1997ರಲ್ಲಿ ಸ್ಥಾಪಿತವಾದ ಕಿಂಗ್ ಚಾರ್ಲ್ಸ್2 ಪದಕ ಪ್ರಶಸ್ತಿಯನ್ನು ಪ್ರಥಮವಾಗಿ ಜಪಾನ್ ಚಕ್ರವರ್ತಿ ಅಕಿಹಿಟೋ ಅವರಿಗೆ 1998ರಲ್ಲಿ ಪ್ರದಾನ ಮಾಡಲಾಗಿತ್ತು.ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಆಜಾದ್ ಅವರು ಪ್ರಶಸ್ತಿ ಪಡೆದ ಎರಡನೇ ನಾಯಕರಾಗಿದ್ದಾರೆ.

ಕಿಂಗ್ ಚಾರ್ಲ್ಸ್2 ಪದಕ ಪ್ರಶಸ್ತಿ ನೀಡಿದ ರಾಯಲ್ ಸೂಸೈಟಿಯನ್ನು ಅಭಿನಂದಿಸಿದ ಕಲಾಂ ಅವರು ಈ ಪ್ರಶಸ್ತಿ ಭಾರತ ಮತ್ತು ಭಾರತ ಜನತೆಗೆ ಸಲ್ಲಿಸಿದ ಗೌರವವಾಗಿದೆ ಎಂದರು.

ರಾಯಲ್ ಸೂಸೈಟಿಯಲ್ಲಿ 60ಕ್ಕೂ ಹೆಚ್ಚು ನೊಬೆಲ್ ಪುರಸ್ಕ್ರತರು 1,400ಕ್ಕೂ ಹೆಚ್ಚಿನ ವಿದೇಶಿ ಸದಸ್ಯರನ್ನು ಒಳಗೊಂಡಿದ್ದು, ವೈಜ್ಞಾನಿಕ ಕ್ಷೇತ್ರ ಹಾಗೂ ಸಮಾಜಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದೆ ಎಂದು ಕಲಾಂ ಶ್ಲಾಘಿಸಿದರು.
ಮತ್ತಷ್ಟು
ಭುಟ್ಟೊ ಹತ್ಯೆಗೆ ನಾಲ್ಕು ಆತ್ಮಹತ್ಯೆ ದಳಗಳು
ಆತ್ಮಹತ್ಯೆ ದಾಳಿ: ವಿಭಿನ್ನ ಹೇಳಿಕೆ
ಆತ್ಮಹತ್ಯೆ ದಾಳಿಗೆ ಬೇನಜೀರ್ ಹೊಣೆ:ಇಮ್ರಾನ್
ವಾಯುನೆಲೆ ಮೇಲೆ ದಾಳಿ: ಐವರ ಹತ್ಯೆ
ಹು ಜಿಂಟಾವೊ ಕಮ್ಯೂನಿಸ್ಟ್ ಪ್ರ.ಕಾರ್ಯದರ್ಶಿ
ಮಧ್ಯಂತರ ಚುನಾವಣೆ: ಪ್ರಮುಖ ಹುದ್ದೆಗಳಿಗೆ ಭುಟ್ಟೋ ಚಿಂತನೆ