ಗ್ಲಾಸ್ಗೊ ವಿಮಾನ ನಿಲ್ದಾಣ ಸ್ಫೋಟಕ್ಕೆ ಸಂಬಂಧಿಸಿದಂತೆ ಸಂಶಯದ ಆಧಾರದ ಮೇಲೆ ಬಂಧಿತನಾಗಿದ್ದ ಭಾರತೀಯ ಮೂಲದ ವೈದ್ಯ ಡಾ ಹನೀಫ್ ವಿರುದ್ಧ ಸಾಕಷ್ಟು ಪುರಾವೆಗಳು ಇರಲಿಲ್ಲ ಎಂಬ ಆಸ್ಟ್ರೇಲಿಯನ್ ಫೆಡರಲ್ ಪೊಲೀಸರ ವಾದಕ್ಕೆ ಡಾ ಹನೀಫ್ ಪರ ವಾದಿಸಿದ್ದ ನ್ಯಾಯವಾದಿ ಪೀಟರ್ ರುಸ್ಸೊ ಅವರು ಅಚ್ಚರಿಯ ಆಘಾತ ವ್ಯಕ್ತಪಡಿಸಿ, ಪೊಲೀಸ್ ಅಧಿಕಾರಿಗಳ ಮಾತನ್ನು ಗಮನಿಸಿದಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಹಿರಂಗವಾಗಬೇಕಾದ ಮಾಹಿತಿ ಸಾಕಷ್ಟು ಇದೆ.
ಜನರಿಗೆ ತಿಳಿದಿರುವುದಕ್ಕಿಂತ ಹೆಚ್ಚಿನ ವಿಷಯ ಈ ಪ್ರಕರಣದ ತನಿಖಾ ವಿಧಾನ ಬಹಿರಂಗವಾಗಬೇಕಾದ ಅವಶ್ಯಕತೆ ಇದೆ. ಭಾರತೀಯ ಮೂಲದ ವೈದ್ಯನ ವಿರುದ್ಧ ಭಯೋತ್ಪಾದನೆಯ ಆರೋಪ ಹೋರಿಸಿದ್ದ ಪೊಲೀಸರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ಜುಲೈ 16ರಂದು ಜಾಮೀನು ನೀಡಿತ್ತು. ಆದರೆ ಕೆಲವೆ ಗಂಟೆಗಳಲ್ಲಿ ವಲಸೆ ಖಾತೆ ಸಚಿವ ಕೆವಿನ್ ಅಂಡ್ರ್ಯೂಸ್ ಪ್ರಕರಣದಲ್ಲಿ ಮದ್ಯ ಪ್ರವೇಶಿಸಿ ಹನೀಪ್ ಅವರ ವಿಸಾವನ್ನು ರದ್ದುಗೊಳಿಸಿ ಬಂಧನ ಮುಂದುವರಿಯುವಂತೆ ಮಾಡಿದ್ದರು.
ಈಗ ಡಾ ಹನೀಫ್, ವೀಸಾ ರದ್ದತಿಯ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಸ್ಟ್ರೇಲಿಯ ಸರಕಾರವನ್ನು ಕೇಳಿಕೊಂಡಿದ್ದು. ವೀಸಾ ರದ್ದು ಮಾಡುವುದು ಕೆವಿನ್ ಅಂಡ್ರ್ಯೂಸ್‌ರ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹನೀಫ್ ಪರ ವಾದಿಸಲಿರುವ ರುಸ್ಸೊ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆವಿನ್ ಆಂಡ್ರ್ಯೂಸ್ ಮಾತ್ರ ತಮ್ಮ ನಿಲುವಿಗೆ ಅಂಟಿಕೊಂಡಿದ್ದು ಹನೀಫ್ ಅವರಿಗೆ ವೀಸಾ ನೀಡುವುದಕ್ಕೆ ಸಿದ್ದರಿಲ್ಲ. ಆಸ್ಟ್ರೇಲಿಯದ ವಲಸೆ ನಿಯಮಗಳ ಪ್ರಕಾರ ವೈದ್ಯರಿಗೆ ನೀಡಲಾಗುವ ಉದ್ಯೋಗ ವಿಸಾವನ್ನು ರದ್ದುಗೊಳಿಸುವಂತಿಲ್ಲ.
|