ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಥೋರಿಯಂ ಸ್ಥಾವರಗಳಿಗೆ ಕಲಾಂ ಕರೆ
PTI
ಥೋರಿಯಂ ಇಂಧನ ಮೂಲದ ಸ್ಥಾವರಗಳ ಮೂಲಕ ಭಾರತ ಪರಮಾಣು ಶಕ್ತಿಯಲ್ಲಿ ಸ್ವಾವಲಂಬನೆ ಸಾಧಿಸಲು ಯತ್ನಿಸಬೇಕು ಎಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಬುಧವಾರ ತಿಳಿಸಿದರು. ಯಾವುದೇ ಪರಮಾಣು ಒಪ್ಪಂದವಾಗಿರಲಿ, ಅದರಿಂದ ಸಹಾಯವಾಗಬಹುದು.

ಆದರೆ ಥೋರಿಯಂ ಇಂಧನ ಮೂಲದ ಸ್ಥಾವರಗಳಿಗೆ ಒತ್ತು ನೀಡುವ ಮೂಲಕ ಭಾರತ ಸ್ವಾವಲಂಬನೆ ಸಾಧಿಸಬೇಕು ಎಂದು ಕಲಾಂ ಸಂದರ್ಶನವೊಂದರಲ್ಲಿ ಹೇಳಿದರು.

ಭಾರತ-ಅಮೆರಿಕ ಪರಮಾಣು ಒಪ್ಪಂದ ಕುರಿತ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ನಮ್ಮ ಎಲ್ಲ ಪರಮಾಣು ಸ್ಥಾವರಗಳು ಯುರೇನಿಯಂ ಮೂಲದ್ದಾಗಿದೆ. ನಮ್ಮ ರಾಷ್ಟ್ರದಲ್ಲಿ ಯುರೇನಿಯಂ ಕೊರತೆಯಿದೆ. ಆದರೆ ನಮ್ಮಲ್ಲಿ ಹೇರಳವಾದ ಥೋರಿಯಂ ನಿಕ್ಷೇಪವಿದೆ ಎಂದು ಅವರು ಹೇಳಿದರು.

ಅದೂ ಸಹ ಇಂಧನವಾಗಿದ್ದು ವಿದಳನ ವಸ್ತುವಲ್ಲ. ನಾವು ಫಾಸ್ಟ್ ಬ್ರೀಡರ್ ಸ್ಥಾವರದ ಮೂಲಕ ಅದನ್ನು ವಿದಳನ ವಸ್ತುವಾಗಿ ಪರಿವರ್ತಿಸಬೇಕು ಎಂದು ಕಲಾಂ ಹೇಳಿದರು. ಆದ್ದರಿಂದ ನಮಗೆ ಸ್ವಲ್ಪ ಯುರೇನಿಯಂ ಹರಿವಿನ ಅಗತ್ಯವಿದ್ದರೂ ಥೋರಿಯಂ ಮೂಲದ ಸ್ಥಾವರಕ್ಕೆ ಯತ್ನಿಸುವುದು ನಮ್ಮ ಆಯ್ಕೆಯಾಗಿದೆ ಎಂದು ಕಲಾಂ ಹೇಳಿದರು.

ಈ ಕ್ಷೇತ್ರದಲ್ಲಿ ಇನ್ನೂ ವಿಪುಲ ಸಂಶೋಧನೆ ಮಾಡಬೇಕಾದ ಅಗತ್ಯವಿದೆ. ನಮ್ಮ ವಿಜ್ಞಾನಿಗಳು ಅದರ ಅಭಿವೃದ್ಧಿಯಲ್ಲಿ ನಿರತರಾಗಿದ್ದು, ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಥೋರಿಯಂ ಮೂಲದ ಸ್ಥಾವರಗಳು ವಾಸ್ತವ ರೂಪ ಪಡೆಯುತ್ತದೆ ಎಂದು ಕಲಾಂ ಹೇಳಿದರು.
ಮತ್ತಷ್ಟು
ಪ್ರಣವ್ ಮುಖರ್ಜಿ ಚೀನಕ್ಕೆ ಆಗಮನ
ಪಾಕ್: ಮೌಲ್ವಿ ವಿರುದ್ದ ಸೈನಿಕ ಕಾರ್ಯಾಚರಣೆ
ಹನೀಫ್ ವಿರುದ್ಧ ಪುರಾವೆ ಇರಲಿಲ್ಲ: ಎಎಫ್‌ಪಿ
'ಅಣು' ಸಮಯ ಮೀರುತ್ತಿದೆ: ಅಮೆರಿಕ ಎಚ್ಚರಿಕೆ
ಮೂವರು ಭಾರತೀಯ ಮಕ್ಕಳ ಸಾವು
ತಾಲಿಬಾನ್ ನಿಕಟ ಗುಂಪುಗಳಿಗೆ ಪಾಕ್ ಬೆಂಬಲ