ಕರಾಚಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣ ಮಹತ್ವದ ತಿರುವು ತೆಗೆದುಕೊಂಡಿದ್ದು, ಮಾಜಿ ಪ್ರಧಾನ ಮಂತ್ರಿ ಬೇನಜೀರ್ ಭುಟ್ಟೊ ಬುಧವಾರ ತಮ್ಮ ಹತ್ಯೆಗೆ ಯತ್ನಿಸಿದ ಉನ್ನತ ಸ್ತರದ ನಾಲ್ವರು ವ್ಯಕ್ತಿಗಳನ್ನು ಹೆಸರಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಪರ್ವೇಜ್ ಎಲಾಹಿ, ಗುಪ್ತಚರ ಇಲಾಖೆ ಮುಖ್ಯಸ್ಥ ಇಜಾಜ್ ಅಹ್ಮದ್, ಮಾಜಿ ಐಎಸ್‌ಐ ಮುಖಂಡ ಹಮೀದ್ ಗುಲ್ ಮತ್ತು ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೊದ ಮಾಜಿ ಉಪಾಧ್ಯಕ್ಷ ಹಸನ್ ವಾಸೀಮ್ ಅಫ್ಜಲ್ ಹೆಸರುಗಳು ಇದರಲ್ಲಿ ಸೇರಿವೆ. ಸರ್ಕಾರಕ್ಕೆ ಪತ್ರ ಬರೆದಿರುವ ಅವರು ಈ ಪತ್ರದಲ್ಲಿ ಶಂಕಿತರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.
ಇದಕ್ಕೆ ಮುನ್ನ, ಹತ್ಯೆ ಯತ್ನದಲ್ಲಿ ಮೂವರು ವ್ಯಕ್ತಿಗಳನ್ನು ಭುಟ್ಟೊ ಶಂಕಿಸಿದ್ದರು. ಮುಷರ್ರಫ್‌ಗೆ ಆತ್ಮೀಯರಾದ ವ್ಯಕ್ತಿಗಳು ಕೂಡ ಅದರಲ್ಲಿ ಸೇರಿದ್ದರು.
|