ಎಲ್‌ಟಿಟಿಇ ಬಂಡುಕೋರರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉಪಕ್ರಮವಾಗಿ ಎಲ್‌ಟಿಟಿಇ ಮತ್ತು ಕರುಣಾ ಬಣಗಳು ನೋಂದಣಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಬಹುದಾದ ಶಾಸನವನ್ನು ಶ್ರೀಲಂಕಾ ಸಂಸತ್ತು ಅನುಮೋದಿಸಿದೆ. ಈ ಕುರಿತು ತಿದ್ದುಪಡಿ ಮಾಡಿರುವ ಸ್ಥಳೀಯ ಸರ್ಕಾರ ಕಾಯ್ದೆಯನ್ನು ಭಾರೀ ಬಹುಮತದಿಂದ ಬುಧವಾರ ಅನುಮೋದಿಸಲಾಯಿತು.
ಕಾಯ್ದೆಯ ಪರವಾಗಿ 66 ಮತಗಳು ಮತ್ತು ವಿರೋಧವಾಗಿ 12 ಮತಗಳು ಬಿದ್ದಿವೆ. 30ಕ್ಕೂ ಹೆಚ್ಚು ಸ್ಥಳೀಯ ಸರ್ಕಾರಗಳ ಪ್ರಸಕ್ತ ಚುನಾವಣೆ ನಾಮಪತ್ರಗಳನ್ನುರದ್ದು ಮಾಡುವುದರಿಂದ ಹೊಸ ಪಕ್ಷಗಳ ನೋಂದಣಿಗೆ ಚುನಾವಣಾಧಿಕಾರಿಗೆ ಅವಕಾಶ ಸಿಗುತ್ತಿದೆ.
ಇದರಿಂದ ಕರುಣಾ ಬಣಗಳು ಮತ್ತು ಎಲ್‌ಟಿಟಿಇ ನೋಂದಣಿ ಮಾಡಿಸಿ ಚುನಾವಣೆಗೆ ಸ್ಪರ್ಧಿಸಬಹುದೆಂದು ಶ್ರೀಲಂಕಾ ಸರ್ಕಾರದ ಅಧಿಕೃತ ವೆಬ್‌ಸೈಟ್ ಹೇಳಿದೆ.
|