ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ರಾಷ್ಟ್ರದ ಭದ್ರತೆಗೆ ಆಂತರಿಕ ಬೆದರಿಕೆ:ಮುಷರ್ರಫ್
ರಾಷ್ಟ್ರದ ಭದ್ರತೆಗೆ ಆಂತರಿಕ ಬೆದರಿಕೆಯಿದ್ದು, ಬೆರಳೆಣಿಕೆಯಷ್ಟು ಉಗ್ರಗಾಮಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ್ದಾರೆ ಎಂದು ಅಧ್ಯಕ್ಷ ಪರ್ವೇಜ್ ಮುಷರ್ರಫ್ ಗುರುವಾರ ತಿಳಿಸಿದರು.ತಾಲಿಬಾನ್ ಪರ ಧರ್ಮಗುರುವಿನ ಪ್ರತಿಚಟುವಟಿಕೆಗಳನ್ನು ನಿಗ್ರಹಿಸಲು ಪಾಕಿಸ್ತಾನದ ವಾಯವ್ಯ ಪ್ರಾಂತ್ಯದಲ್ಲಿ ಸೇನೆ ನಿಯೋಜನೆಯಾಗುತ್ತಿರುವ ನಡುವೆ ಮುಷರ್ರಫ್ ಹೇಳಿಕೆ ಹೊರಬಿದ್ದಿದೆ.

ಈ ಸಮಸ್ಯೆಗೆ ಒಂದೇ ಪರಿಹಾರ ದ್ವೇಷವನ್ನು ಬಿತ್ತುವ ಶಕ್ತಿಗಳನ್ನು ತಿರಸ್ಕರಿಸುವುದು. ಸಮಾಜವನ್ನು ಒಡೆಯುವ ಅಥವಾ ಸ್ವಂತ ಇಚ್ಛೆಯನ್ನು ಹೇರುವ ಮೂಲಕ ಸಮಾಜವನ್ನು ಧ್ರುವೀಕರಿಸಲು ಪ್ರಯತ್ನಿಸುವ ಶಕ್ತಿಗಳಿಗೆ ಇಸ್ಲಾಮಿಕ್ ಸಮಾಜದಲ್ಲಿ ಸ್ಥಾನವಿಲ್ಲ ಎಂದು ಅವರು ನುಡಿದರು.

ತಾಲಿಬಾನ್ ಪರ ಧರ್ಮಗುರು ಮೌಲಾನಾ ಫಜಲುಲ್ಲಾ ಮತ್ತು ಅವರ ನಿಷೇಧಿತ ತಾಹ್ರೀಕ್ ನಿಫಾಜ್-ಎ-ಶಾರಿಯತ್ ಮೊಹಮ್ಮೇದಿ ಅವರ ಚಟುವಟಿಕೆಗಳನ್ನು ಹತ್ತಿಕ್ಕಲು ಸ್ವಾಟ್ ಕಣಿವೆಯಲ್ಲಿ 4000 ಸೈನಿಕರನ್ನು ನಿಯೋಜಿಸಿದ ಬಳಿಕ ಮುಷರ್ರಫ್ ಹೇಳಿಕೆ ಹೊರಬಿದ್ದಿದೆ.

ಅಕ್ರಮ ಎಫ್‌ಎಂ ರೇಡಿಯೊ ಸ್ಟೇಷನ್‌ನಿಂದ ಜಿಹಾದ್‌ ಕರೆಗಳನ್ನು ಪ್ರಸಾರ ಮಾಡುವುದರಿಂದ ಮುಲ್ಲಾ ರೇಡಿಯೊ ಅಥವಾ ಎಫ್‌ಎಂ ಮೌಲಾನಾ ಎಂದೇ ಜನಪ್ರಿಯರಾದ ಫಜಲುಲ್ಲಾ ಮತ್ತು ಅವರ ಶಸ್ತ್ರಸಜ್ಜಿತ 400 ಮಂದಿ ಅನುಯಾಯಿಗಳು ಸ್ಥಳೀಯ ಆಡಳಿತದ ಆದೇಶವನ್ನು ಪ್ರಶ್ನಿಸಿ ಪೊಲೀಸರು ನಿರ್ವಹಿಸುವ ಕೆಲಸವನ್ನು ಮಾಡುತ್ತಿದ್ದರು.
ಮತ್ತಷ್ಟು
ಇಂಡೋನೇಶಿಯದಲ್ಲಿ ಭಾರೀ ಭೂಕಂಪ
ಟರ್ಕಿ, ಮಧ್ಯಪೂರ್ವಕ್ಕೆ ರೈಸ್ ಭೇಟಿ
ಅಂತರಾಷ್ಟ್ರೀಯ ಸಂಬಂಧ ಬಲಗೊಳ್ಳಬೇಕು:ಪ್ರಣಬ್
ಚುನಾವಣೆ ಸ್ಪರ್ಧೆಗೆ ಎಲ್‌ಟಿಟಿಇಗೆ ಅವಕಾಶ
ನಾಲ್ವರನ್ನು ಹೆಸರಿಸಿದ ಬೇನಜೀರ್ ಭುಟ್ಟೊ
ಥೋರಿಯಂ ಸ್ಥಾವರಗಳಿಗೆ ಕಲಾಂ ಕರೆ