ಸೌದಿ ಅರೇಬಿಯಾ ಸರ್ಕಾರವು ಮಾಜಿ ಪ್ರಧಾನಮಂತ್ರಿ ನವಾಜ್ ಷರೀಪ್ ಅವರಿಗೆ ಪಾಕಿಸ್ತಾನಕ್ಕೆ ಹಿಂತಿರುಗಲು ಒಪ್ಪಿಗೆ ನೀಡಿದ್ದು, ನವೆಂಬರ್‌ನಲ್ಲಿ ಅವರ ವಾಪಸಾತಿಗೆ ವಿಧಿವಿಧಾನಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪಿಎಂಎಲ್-ಎನ್ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಇಷ್ಟಬಂದಾಗ ಪಾಕ್‌ಗೆ ಹಿಂತಿರುಗಬಹುದು ಎಂದು ಸೌದಿ ಅರೇಬಿಯ ಈಗಾಗಲೇ ನವಾಜ್ ಷರೀಫ್ ಅವರಿಗೆ ಸೂಚಿಸಿದೆ ಎಂದು ಪಿಎಂಎಲ್-ಎನ್ ಉಸ್ತುವಾರಿ ಅಧ್ಯಕ್ಷ ಮಕ್ದೂಮ್ ಜಾವೇದ್ ಹಶ್ಮಿ ತಿಳಿಸಿದರು." ಸಾರ್ವತ್ರಿಕ ಚುನಾವಣೆಗೆ ಮುನ್ನ ಷರೀಫ್ ರಾಷ್ಟ್ರಕ್ಕೆ ಹಿಂತಿರುಗುವುದಿಲ್ಲ ಎಂದು ಅಧ್ಯಕ್ಷ ಮುಷರ್ರಫ್ ಹೇಳಿಕೆ ನೀಡಿದ ಬಳಿಕ ಹಶ್ಮಿ ಪ್ರತಿಪಾದನೆ ಹೊರಬಿದ್ದಿದೆ.
ಷರೀಫ್ ಅವರು ಸೆ.10ರಂದು ಪಾಕ್‌ಗೆ ವಾಪಸಾದ ನಾಲ್ಕುಗಂಟೆಗಳಲ್ಲಿ ಬಂಧಿಸಿ ಸೌದಿಅರೇಬಿಯಾಕ್ಕೆ ಗಡೀಪಾರು ಮಾಡಲಾಗಿತ್ತು. ಮುಖ್ಯನ್ಯಾಯಾಮೂರ್ತಿ ಇಫ್ತಿಕರ್ ಮುಹಮದ್ ಚೌಧರಿ ನೇತೃತ್ವದ ಪೀಠವು ಪ್ರಸಕ್ತ ಷರೀಫ್ ಗಡೀಪಾರು ಪ್ರಶ್ನಿಸಿದ ನ್ಯಾಯಾಲಯ ನಿಂದನಾ ಅರ್ಜಿಯ ವಿಚಾರಣೆ ನಡೆಸುತ್ತಿದೆ.
|