ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಚೀನಾದ ಅದ್ಭುತ ಪ್ರಗತಿ: ಸೋನಿಯಾ ದಿಗ್ಮೂಢ
PTI
ಚೀನಾದ ಬದಲಾವಣೆಯ ಗತಿ ನಿಜವಾಗಲೂ ಆಶ್ಚರ್ಯಕರ ಮತ್ತು ಅದ್ಭುತ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ. ಕಮ್ಯುನಿಸ್ಟ್ ರಾಷ್ಟ್ರ ಆರ್ಥಿಕ ಸುಧಾರಣೆಗಳನ್ನು ಮತ್ತು ಉದಾರೀಕರಣವನ್ನು ಹೇಗೆ ಜಾರಿಗೆ ತಂದಿತೆಂಬುದನ್ನು ಭಾರತ ಪಾಠ ಕಲಿಯುವುದು ಬೇಕಾದಷ್ಟಿದೆ ಎಂದು ಅವರು ನುಡಿದರು.

ಸಿಂಗುವಾ ವಿವಿಯ ಸಾರ್ವಜನಿಕ ನೀತಿ ಮತ್ತು ನಿರ್ವಹಣೆಯ ಶಾಲೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ-ಚೀನಾ "ಭವಿಷ್ಯತ್ತಿನ ಬಾಂಧವ್ಯಕ್ಕೆ ಪ್ರಾಯೋಗಿಕ ದೃಷ್ಟಿಕೋನ ಮತ್ತು ಪರಸ್ಪರ ಹಿತಾಸಕ್ತಿ ಗಟ್ಟಿ ಅಡಿಪಾಯ ಹಾಕುತ್ತದೆ ಎಂದು ಹೇಳಿದರು.

ಏಷ್ಯದ ಪುನರುಜ್ಜೀವನ ಮತ್ತು ಚೀನಾ ಮತ್ತು ಭಾರತದ ಪುನರೋದಯದ ವಾಸ್ತವವನ್ನು ಜಗತ್ತು ಗುರುತಿಸಿದೆ. ಉಭಯ ರಾಷ್ಟ್ರಗಳ ಬೆಳವಣಿಗೆ ಮತ್ತು ಆಕಾಂಕ್ಷೆಗಳಿಗೆ ಸ್ಥಾನ ನೀಡಲು ಜಗತ್ತು ಸಾಕಷ್ಟು ವಿಶಾಲವಾಗಿದ್ದು, ಉಭಯ ರಾಷ್ಟ್ರಗಳು ಒಟ್ಟಿಗೆ ಕೆಲಸ ಮಾಡಿ ಸಮೃದ್ಧಿಯಾಗಬೇಕು" ಎಂದು ಹೇಳಿದರು.

1978ರಿಂದ ಚೀನಾ ಆರ್ಥಿಕ ಸುಧಾರಣೆ ಕೈಗೊಂಡಾಗಿನಿಂದ ಸಾಧಿಸಿದ ಅದ್ಭುತ ಪ್ರಗತಿ ಬಗ್ಗೆ ಭಾರತೀಯರು ಮೆಚ್ಚುತ್ತಾರೆ ಎಂದು ಸೋನಿಯಾ ಹೇಳಿದರು. ಪ್ರಾಯೋಗಿಕ ದೃಷ್ಟಿಕೋನ, ಸ್ಪಷ್ಟ ಮುನ್ನೋಟ ಮತ್ತು ದೃಢ ಸಂಕಲ್ಪದಿಂದ ಎಷ್ಟು ಸಾಧಿಸಬಹುದೆಂದು ಚೀನಾ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಸೋನಿಯಾ ಹೇಳಿದರು.
ಮತ್ತಷ್ಟು
ಬ್ರೂನೈ ಸುಲ್ತಾನರ ಐಷಾರಾಮಿ ಜೀವನಶೈಲಿ
ಐಎಇಎಗೆ ಅನುಮತಿ ನೀಡುವುದಿಲ್ಲ:ಮುಷರಫ್
ಷರೀಫ್‌ಗೆ ಹಿಂತಿರುಗಲು ಸೌದಿ ಒಪ್ಪಿಗೆ
ಚೀನಾ ಭೇಟಿ ಮೈಲಿಗಲ್ಲು: ಸೋನಿಯಾ
ದೇಶಕ್ಕಾಗಿ ಅಪಾಯ ಎದುರಿಸಲು ಸಿದ್ಧ: ಭುಟ್ಟೊ
ಟ್ರಕ್‌ನಲ್ಲಿ ಸ್ಫೋಟ: 16 ಸೈನಿಕರ ಸಾವು