ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಕ್ಯಾಲಿಫೋರ್ನಿಯಾದಲ್ಲಿ ಉಗ್ರಸ್ವರೂಪದ ಕಾಳ್ಚಿಚ್ಚು
ಕ್ಯಾಲಿಪೋರ್ನಿಯಾದಲ್ಲಿ ಉಗ್ರಸ್ವರೂಪ ತಾಳಿರುವ ಕಾಳ್ಗಿಚ್ಚಿನ ವಿರುದ್ಧ ಅಗ್ನಿಶಾಮಕ ಪಡೆ ಸಮರೋಪಾದಿಯಲ್ಲಿ ಹೋರಾಡುತ್ತಿದೆ. ಸುಮಾರು 7 ಜನರನ್ನು ಬಲಿತೆಗೆದುಕೊಂಡಿರುವ ಅಗ್ನಿಜ್ವಾಲೆಗಳು ಸುಮಾರು 22,000 ಮನೆಗಳಿಗೆ ಆತಂಕ ಹುಟ್ಟಿಸಿದೆ.

ತಂಪಾದ ಹವಾಮಾನ ಇದ್ದಿದ್ದರಿಂದ ಭಾನುವಾರದಿಂದೀಚೆಗೆ ಭುಗಿಲೆದ್ದ 23 ಕಾಳ್ಗಿಚ್ಚುಗಳನ್ನು ಶಮನ ಮಾಡಲು ಅಗ್ನಿಶಾಮಕ ಪಡೆಗೆ ಅವಕಾಶ ನೀಡಿತು. ಕ್ಯಾಲಿಫೋರ್ನಿಯಾ ಇತಿಹಾಸದಲ್ಲೇ ಭೀಕರವೆಂದು ಹೇಳಲಾದ ಈ ಕಾಳ್ಗಿಚ್ಚಿನಿಂದ ಅಗ್ನಿಶಾಮಕ ಪಡೆ 5 ಲಕ್ಷ ಜನರನ್ನು ತೆರವು ಮಾಡಿದೆ.

ಸುಮಾರು 1,800 ಆಸ್ತಿಪಾಸ್ತಿಗಳು ಬೆಂಕಿಜ್ವಾಲೆಗೆ ಸಿಕ್ಕಿ ಸುಟ್ಟು ಭಸ್ಮವಾಗಿವೆ ಎಂದು ಅಧಿಕಾರಿಗಳು ಹೇಳಿದ್ದು, ಒಂದು ಶತಕೋಟಿ ಡಾಲರ್ ನಷ್ಟ ಸಂಭವಿಸಿದೆ.
ಮತ್ತಷ್ಟು
ಚೀನಾದ ಅದ್ಭುತ ಪ್ರಗತಿ: ಸೋನಿಯಾ ದಿಗ್ಮೂಢ
ಬ್ರೂನೈ ಸುಲ್ತಾನರ ಐಷಾರಾಮಿ ಜೀವನಶೈಲಿ
ಐಎಇಎಗೆ ಅನುಮತಿ ನೀಡುವುದಿಲ್ಲ:ಮುಷರಫ್
ಷರೀಫ್‌ಗೆ ಹಿಂತಿರುಗಲು ಸೌದಿ ಒಪ್ಪಿಗೆ
ಚೀನಾ ಭೇಟಿ ಮೈಲಿಗಲ್ಲು: ಸೋನಿಯಾ
ದೇಶಕ್ಕಾಗಿ ಅಪಾಯ ಎದುರಿಸಲು ಸಿದ್ಧ: ಭುಟ್ಟೊ