ಮ್ಯಾನ್ಮಾರ್ ಮಿಲಿಟರಿ ಆಡಳಿತವು ಪ್ರತಿಪಕ್ಷದ 50 ಮಂದಿಯನ್ನು ಸೆರೆಯಿಂದ ಬಿಡುಗಡೆ ಮಾಡಿದೆ ಮತ್ತು ವಿರೋಧಪಕ್ಷದ ನಾಯಕ ಆಂಗ್ ಸಾನ್ ಸೂಕಿಯನ್ನು ಭೇಟಿ ಮಾಡಿದೆ. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಜುಂಟಾ ಮೇಲಿನ ಕ್ರಮ ಕೈಗೊಂಡಿದೆ.
ಸೂಕಿ ಮತ್ತು ಜುಂಟಾ ನಡುವೆ ರಾಜಿ ಕುದುರಿಸಲು ಯತ್ನಿಸುತ್ತಿರುವ ಅಮೆರಿಕದ ಪ್ರತಿನಿಧಿ ಇಬ್ರಾಹಿಂ ಗಂಭಾರಿ ಜುಂಟಾ ಮತ್ತು ಸೂಕಿ ಭೇಟಿಯು ಒಳ್ಳೆಯ ಆರಂಭ ಎಂದು ಜಪಾನ್‌ನಲ್ಲಿ ಹೇಳಿದ್ದಾರೆ.
ಯಾಂಗಾನ್‌ನ ಸೆರೆಮನೆಯಿಂದ ಸೂಕಿಯ ನ್ಯಾಷನಲ್ ಲೀಗ್‌ಗೆ ಸೇರಿದ 50 ಸದಸ್ಯರು ಮತ್ತು 10 ಭಿಕ್ಕುಗಳು ಸೇರಿದಂತೆ 70 ಜನರನ್ನು ಗುರುವಾರ ಬಿಡುಗಡೆ ಮಾಡಲಾಗಿದೆ ಎಂದು ಪಕ್ಷದ ವಕ್ತಾರ ನ್ಯಾನ್ ವಿನ್ ತಿಳಿಸಿದರು.
ಸುಮಾರು 250 ಪಕ್ಷದ ಕಾರ್ಯಕರ್ತರು ಇನ್ನೂ ಬಂಧನದಲ್ಲಿದ್ದಾರೆ ಎಂದು ಅವರು ನುಡಿದರು. ಈ ನಡುವೆ ಜುಂಟಾ ಯಾಂಗಾನ್‌ನಲ್ಲಿ ನೂರಾರು ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಿದೆ.
ಶಾಂತಿಯುತ ಪ್ರದರ್ಶನಗಳನ್ನು ತಡೆದ ಜುಂಟಾ ಕನಿಷ್ಠ ಸದ್ಬಾವನೆ ಸಂಕೇತಗಳನ್ನು ನೀಡಬೇಕೆಂದು ಅದಕ್ಕೆ ಅಂತಾರಾಷ್ಟ್ರೀಯ ಒತ್ತಡಗಳು ಬಂದಿವೆ.
|