ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ದಕ್ಷಿಣ ಅಫ್ಘನ್‌ನಲ್ಲಿ ತಾಲಿಬಾನ್‌ನಲ್ಲಿ 80 ಉಗ್ರರ ಹತ್ಯೆ
ಅಮೆರಿಕಾ ನೇತೃತ್ವದ ಸೇನಾಪಡೆಯ ಯೋಧರು ದಕ್ಷಿಣ ಅಫ್ಘಾನಿಸ್ತಾನದಲ್ಲಿ, ತಾಲಿಬಾನಾ ಉಗ್ರರ ಬೀಗಿ ಹಿಡಿತವಿರುವ ಪ್ರದೇಶದಲ್ಲಿ ತಾಲಿಬಾನ್ ಮತ್ತು ಅಲ್-ಖೈದಾ ಉಗ್ರರ ಮೇಲೆ ಭಾರಿ ದಾಳಿ ನಡೆಸಿ 80 ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಸಫಲರಾಗಿದ್ದಾರೆ.

ಹೆಲ್ಮಾಂಡ್ ಪ್ರಾಂತ್ಯದಲ್ಲಿ ಉಭಯ ಪಡೆಗಳ ಮಧ್ಯೆ 6 ಗಂಟೆಗಿಂತಲೂ ಹೆಚ್ಚು ನಡೆದ ನಡೆದ ಭೀಕರ ಕದನದಲ್ಲಿ 80 ಉಗ್ರರು ಹತರಾಗಿದ್ದು, ನೂರಾರು ಉಗ್ರರು ಗಾಯಗೊಂಡಿದ್ದಾರೆಂದು ಅಮೆರಿಕನ್ ಸೇನಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರ ಬೀಗಿ ಹಿಡಿತವಿದ್ದು, ಮೊದಲು ತಾಲಿಬಾನ್ ಉಗ್ರರೇ, ಅಮೆರಿಕನ್ ಸೇನಾಪಡೆ ಮತ್ತು ಅಫ್ಘನ್ ಸೇನಾ ಪಡೆಯ ಮೇಲೆ ದಾಳಿ ನಡೆಸಿದ್ದರಿಂದ, ನಾವು ಪ್ರತಿದಾಳಿ ನಡೆಯಬೇಕಾಯಿತು ಎಂದವರು ದಾಳಿಯನ್ನು ಸಮರ್ಥಿಸಿಕೊಂಡರು.

ಕಳೆದ ಎರಡು ತಿಂಗಳ ಅವಧಿಯಲ್ಲಿ ಈ ಪ್ರಾಂತ್ಯದಲ್ಲಿ ತಾಲಿಬಾನ್, ಅಲ್-ಖೈದಾ ಮತ್ತು ಅಮೆರಿಕನ್ ಸೇನಾ ಪಡೆ ಮಧ್ಯೆ ಭಾರಿ ಕಾಳಗ ನಡೆಯುತ್ತಿದ್ದು, ಈ ತಿಂಗಳೊಂದರಲ್ಲಿಯೇ ಕನಿಷ್ಠ ಪಕ್ಷ 250 ಉಗ್ರರು ಹತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಏತನ್ಮಧ್ಯೆ, ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜಾಯಿ ಖಾಸಗಿ ವಾಹಿನಿಯೊಂದಕ್ಕೆ ಶನಿವಾರವಷ್ಟೇ ನೀಡಿದ ಸಂದರ್ಶನದಲ್ಲಿ, ತಾಲಿಬಾನ್ ಉಗ್ರರ ವಿರುದ್ಧ, ಅಮೆರಿಕನ್ ಸೇನೆ ಮತ್ತು ನ್ಯಾಟ್ಯೊ ಪಡೆ ನಡೆಸುತ್ತಿರುವ ದಾಳಿಯಲ್ಲಿ ಮುಗ್ಧ ನಾಗರಿಕರು ಬಲಿಯಾಗುತ್ತಿದ್ದರಿಂದ, ತಕ್ಷಣ ದಾಳಿ ನಿಲ್ಲಿಸುವಂತೆ ಅವರು ಅಮೆರಿಕನ್ ಸೇನಾ ಪಡೆಗೆ ಮನವಿ ಮಾಡಿಕೊಂಡಿದ್ದರು.
ಮತ್ತಷ್ಟು
10 ತಮಿಳು ಉಗ್ರರ ಹತ್ಯೆ ಕೊಲಂಬೊ
ಜುಂಟಾದಿಂದ 50 ಮಂದಿ ಬಿಡುಗಡೆ
ಕ್ಯಾಲಿಫೋರ್ನಿಯಾದಲ್ಲಿ ಉಗ್ರಸ್ವರೂಪದ ಕಾಳ್ಚಿಚ್ಚು
ಚೀನಾದ ಅದ್ಭುತ ಪ್ರಗತಿ: ಸೋನಿಯಾ ದಿಗ್ಮೂಢ
ಬ್ರೂನೈ ಸುಲ್ತಾನರ ಐಷಾರಾಮಿ ಜೀವನಶೈಲಿ
ಐಎಇಎಗೆ ಅನುಮತಿ ನೀಡುವುದಿಲ್ಲ:ಮುಷರಫ್