ಆಸ್ಟ್ರೇಲಿಯದ ಮುಂಚೂಣಿ ದೂರಸಂಪರ್ಕ ಕಂಪೆನಿಯಾದ ಸೋಲ್ ಆಸ್ಟ್ರೇಲಿಯ, ತನ್ನ ಬೃಹತ್ ಪ್ರಮಾಣದ ಕಾರ್ಯಾಚರಣೆ ವ್ಯವಸ್ಥೆಯ ಟ್ರಾನ್ಸ್‌ಫಾರ್ಮೇಶನ್ ಪ್ರಾಜೆಕ್ಟ್‌ಗಾಗಿ ಪ್ರತ್ಯೇಕ ಕಾರ್ಯಾಚರಣೆಗಳ ಬೆಂಬಲ ವ್ಯವಸ್ಥೆ(ಒಎಸ್ಎಸ್)ಯ ಸಹಭಾಗಿಯಾಗಿ ತಮ್ಮ ಕಂಪೆನಿಯನ್ನು ಆಯ್ಕೆ ಮಾಡಿರುವುದಾಗಿ ಬೆಂಗಳೂರು ಮೂಲದ ಸುಬೆಕ್ಸ್ ಅಜ್ಯೂರ್ ಲಿ. ಹೇಳಿದೆ.
ಬೆಂಗಳೂರು ಮೂಲದ ಸುಬೆಕ್ಸ್ ಕಂಪೆನಿಯು ಸೋಲ್ ಕಂಪೆನಿಗೆ ಸಿಂಡೆಸಿಸ್ ಫುಲ್‌ಫಿಲ್‌ಮೆಂಟ್ ಸೊಲ್ಯೂಶನ್ಸ್ ಉತ್ಪನ್ನಗಳನ್ನು ಪೂರೈಸಲಿದೆ. ಕಟೆಂಟ್ ಮೂಲದ ನಿವೇದನೆಗಳು ಮತ್ತು ವಿಶಾಲ ವ್ಯಾಪ್ತಿಯ ಸಂಪರ್ಕವನ್ನು ಪೂರೈಸುವುದಕ್ಕಾಗಿ ಈ ಉತ್ಪನ್ನಗಳನ್ನು ಸೋಲ್ ಕಂಪೆನಿಯು ಬಳಸಿಕೊಳ್ಳಲಿದೆ ಎಂದು ಕಂಪೆನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ, ಈ ಕುರಿತಾದ ಹಣಕಾಸು ವ್ಯವಹಾರ ವಿವರವನ್ನು ಸುಬೆಕ್ಸ್ ಕಂಪೆನಿ ಬಹಿರಂಗಗೊಳಿಸಿಲ್ಲ. ಆಸ್ಟ್ರೇಲಿಯಾದ ಐಟಿ ಮಲ್ಟಿ ಮಿಡಿಯಾ ಮಾರುಕಟ್ಟೆಯಲ್ಲಿ ಪ್ರಮುಖ ಕಂಪೆನಿಯಾಗಿರುವ ಸೋಲ್, ಧ್ವನಿ ಮತ್ತು ಡೆಟಾ ನೆಟ್‌ವರ್ಕ್‌ನಲ್ಲಿ ಆಸ್ಟ್ರೇಲಿಯಾದ ಎರಡನೆ ಅತಿ ದೊಡ್ಡ ಕಂಪೆನಿಯಾಗಿದೆ.
ಸ್ವಯಂ ಚಾಲಿತ ಎನ್ ಪ್ಲೇ ಮತ್ತು ಬಹುಸೇವೆಗಳ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಧ್ವನಿ, ವಿಡಿಯೊ, ಡೆಟಾ ಮತ್ತು ಮೊಬೈಲ್‌ಗಳನ್ನು ಮೀರಿದ ಸೇವೆಯನ್ನು ಸೋಲ್ ಕಂಪೆನಿ ನೀಡಬಹುದಾಗಿದೆ ಎಂದು ಸುಬೆಕ್ಸ್ ತಿಳಿಸಿದೆ.
|