ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸಾಮೂಹಿಕ ಆತ್ಮಹತ್ಯೆಗೆ ನಾಲ್ವರು ಬಲಿ
ಜಪಾನ್‌ನಲ್ಲಿ ಸಾಮೂಹಿಕ ಆತ್ಮಹತ್ಯೆ ಎಂದು ಶಂಕಿಸಲಾದ ಪ್ರಕರಣವೊಂದರಲ್ಲಿ ಕಾರ್ಬನ್ ಮಾನಾಕ್ಸೈಡ್ ವಿಷಾನಿಲದಿಂದ ತುಂಬಿದ ಕಾರಿನಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ. ಟೋಕಿಯೊಗೆ ಈಶಾನ್ಯದಲ್ಲಿ ಟೋಚಿಗಿ ಅರಣ್ಯದ ಒಳಗಿನ ಸಣ್ಣ ಹಾದಿಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಈ ಆತ್ಮಹತ್ಯೆ ಪ್ರಕರಣ ಕಂಡುಬಂದಿದೆ.

20,22 ಮತ್ತು 38 ವಯೋಮಾನದ ಮೂವರು ಪುರುಷರು ಮತ್ತು 30 ವರ್ಷ ವಯಸ್ಸಿನ ಒಬ್ಬ ಮಹಿಳೆಯ ಮೃತದೇಹಗಳು ಪತ್ತೆಯಾಗಿದ್ದು, ಎಲ್ಲ ಟೊಕಿಯೊ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. 22 ವರ್ಷ ವಯಸ್ಸಿನ ವ್ಯಕ್ತಿಯ ಕುಟುಂಬವನ್ನು ಹೊರತುಪಡಿಸಿ ಇನ್ನೆಲ್ಲ ಕುಟುಂಬಗಳು ನಾಪತ್ತೆ ಪ್ರಕರಣಗಳನ್ನು ದಾಖಲಿಸಿದ್ದವು ಎಂದು ಪೊಲೀಸರು ತಿಳಿಸಿದ್ದು, ಇದನ್ನು ಸಾಮೂಹಿಕ ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿದ್ದಾರೆ.

ಕಾರಿನ ಹಿಂಭಾಗದಲ್ಲಿ ಪೂರ್ಣವಾಗಿ ಉರಿಸಿದ ಮೂರು ಇದ್ದಲು ಬರ್ನರ್‌ಗಳು ಪತ್ತೆಯಾಗಿವೆ ಎಂದು ತನಿಖೆದಾರರು ತಿಳಿಸಿದ್ದಾರೆ. ಜಪಾನ್‌ನಲ್ಲಿ ಅತ್ಯಧಿಕ ಸಂಖ್ಯೆಯ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕ ಮೂಡಿಸಿದೆ.

ಅಪರಿಚಿತರು ಇಂಟರ್‌ನೆಟ್ ಮೂಲಕ ಸಂಪರ್ಕ ಹೊಂದಿ ಬಳಿಕ ಯಾವುದಾದರೂ ಪ್ರದೇಶಕ್ಕೆ ಹೋಗಿ ಕಾರ್ಬನ್ ಮಾನಾಕ್ಸೈಡ್ ವಿಷಾನಿಲದ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಜಪಾನ್‌ನಲ್ಲಿ ಹೆಚ್ಚುತ್ತಿದೆ.
ಮತ್ತಷ್ಟು
ಸೋಲ್ ಆಸ್ಟ್ರೇಲಿಯಾದೊಂದಿಗೆ ಸುಬೆಕ್ಸ್ ಒಪ್ಪಂದ
ದಕ್ಷಿಣ ಅಫ್ಘನ್‌ನಲ್ಲಿ ತಾಲಿಬಾನ್‌ನಲ್ಲಿ 80 ಉಗ್ರರ ಹತ್ಯೆ
10 ತಮಿಳು ಉಗ್ರರ ಹತ್ಯೆ ಕೊಲಂಬೊ
ಜುಂಟಾದಿಂದ 50 ಮಂದಿ ಬಿಡುಗಡೆ
ಕ್ಯಾಲಿಫೋರ್ನಿಯಾದಲ್ಲಿ ಉಗ್ರಸ್ವರೂಪದ ಕಾಳ್ಚಿಚ್ಚು
ಚೀನಾದ ಅದ್ಭುತ ಪ್ರಗತಿ: ಸೋನಿಯಾ ದಿಗ್ಮೂಢ