ಶ್ರೀಲಂಕಾ ಭದ್ರತಾ ಪಡೆ ಜತೆ ಪ್ರತ್ಯೇಕ ಘರ್ಷಣೆಗಳಲ್ಲಿ ಕನಿಷ್ಠ 20 ತಮಿಳು ಬಂಡುಕೋರರು ಸತ್ತಿದ್ದಾರೆ ಎಂದು ಸೇನೆ ಸೋಮವಾರ ತಿಳಿಸಿದೆ. ಉತ್ತರ ಜಾಫ್ನಾದ ನಾಗರಕೊಯಿಲ್ ಗ್ರಾಮದಲ್ಲಿ ರಕ್ಷಣಾ ಪ್ರದೇಶದ ಮುಂಚೂಣಿಗೆ ಮುನ್ನಗ್ಗಲು ಯತ್ನಿಸಿದ ವ್ಯಾಘ್ರನನ್ನು ಗುಂಡಿಟ್ಟು ಕೊಲ್ಲಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಇನ್ನೊಂದು ಘಟನೆಯಲ್ಲಿ ಎಲ್‌ಟಿಟಿಇ ಪ್ರಾಬಲ್ಯದ ವಾನ್ನಿ ಪ್ರದೇಶದ ಗಡಿ ಗ್ರಾಮವಾದ ತಂಪಾನೆಯಲ್ಲಿ ಶೋಧ ಕಾರ್ಯಾಚರಣೆಯಲ್ಲಿ ನಿರತವಾದ ಇಬ್ಬರು ಸೈನಿಕರು ನೆಲಬಾಂಬ್ ಸ್ಫೋಟದಲ್ಲಿ ಭಾನುವಾರ ಗಾಯಗೊಂಡರು . ವಾಯವ್ಯ ಮನ್ನಾರ್‌ನ ಮುರಂಕುಲಂನಲ್ಲಿ ವ್ಯಾಘ್ರಬಂಡುಕೋರು ನುಸುಳುತ್ತಿದ್ದಾಗ ಪಡೆಗಳು ಮುಖಾಮುಖಿಯಾಗಿ ಗುಂಡುಹಾರಿಸಿ ಮೂವರನ್ನು ಕೊಂದರು. ಭಾನುವಾರ ನಡೆದ ಇನ್ನೊಂದು ಪ್ರತ್ಯೇಕ ಗುಂಡಿನ ಕಾಳಗದಲ್ಲಿ ಎಲ್‌ಟಿಟಿಇ ಬಂಡುಕೋರರ ಜತೆ ಮನ್ನಾರ್‌ನ ಉತ್ತರಕ್ಕಿರುವ ಭದ್ರತಾ ಪಡೆಗಳು ಘರ್ಷಣೆಗಿಳಿದು ಅವರಲ್ಲಿ ಕನಿಷ್ಠ 6 ಮಂದಿಯನ್ನು ಕೊಂದು ಹಾಕಿದ್ದಾರೆ.
|