ಅನಿವಾಸಿ ಭಾರತೀಯರಾದ ಲಾರ್ಡ್ ಖಲೀದ್ ಹಮೀದ್ ಅವರು ಆರೋಗ್ಯ ಸೇವೆ ಸೇರಿದಂತೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಅತ್ಯಮೂಲ್ಯ ಕೊಡುಗೆಗಾಗಿ 2007ನೆ ಸಾಲಿನ ಏಷ್ಯನ್ ಎಂಬ ಗೌರವ ನೀಡಲಾಗಿದೆ.
ಲಕ್ನೋದಲ್ಲಿ ಜನಿಸಿದ 66 ವರ್ಷ ವಯಸ್ಸಿನ ಡಾ. ಹಮೀದ್ ಪ್ರಸಕ್ತ ಆಲ್ಫಾ ಆಸ್ಪತ್ರೆ ಸಮೂಹದ ಅಧ್ಯಕ್ಷ ಮತ್ತು ಲಂಡನ್ ಅಂತಾರಾಷ್ಟ್ರೀಯ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಹಿಲ್ಟನ್ ಹೊಟೆಲ್‌ನಲ್ಲಿ ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ ಏಷ್ಯನ್ ಹೂಈಸ್ ಹೂ 2007 ಸಮಾರಂಭದಲ್ಲಿ ಲಾರ್ಡ್ ಹಮೀದ್‌ಗೆ ಪ್ರಧಾನ ಮಾಡಲಾಯಿತು.
ಸನ್‌ರೈಸ್ ರೇಡಿಯೊ ಮತ್ತು ಬ್ರಿಟನ್‌ನಲ್ಲಿ ಏಷ್ಯನ್ ಬ್ರಾಡ್‌ಕಾಸ್ಟಿಂಗ್ ಆದ್ಯಪ್ರವರ್ತಕ ಡಾ. ಅವತಾರ್ ಲಿಟ್, ಈಸ್ಟ್ ಎಂಡ್ ಫುಡ್ಸ್‌ನ ಮುಖ್ಯಸ್ಥ ಟೋನಿ ದೀಪ್ ವೋಹ್ರಾ ಮತ್ತು ಭಾರತ-ಪಾಕಿಸ್ತಾನ ಬ್ರಿಟನ್ ಸ್ನೇಹ ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ. ಅಶ್ರಫ್ ಚೋಹಾನ್ ಇನ್ನಿತರ ಪ್ರಶಸ್ತಿ ವಿಜೇತರು.
ಬ್ರಿಟನ್‌ನ ಮಾಜಿ ಪ್ರಧಾನ ಮಂತ್ರಿ ಟೋನಿ ಬ್ಲೇರ್ ಪತ್ನಿ ಚೆರಿ ಬ್ಲೇರ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
|