ಬೇನಜೀರ್ ಭುಟ್ಟೊ ಬೆಂಗಾವಲು ವಾಹನದ ಮೇಲೆ ಬಾಂಬ್ ಸ್ಫೋಟದ ಭೀಕರತೆಯಿಂದ ಪಾಕಿಸ್ತಾನ ಚೇತರಿಸಿಕೊಳ್ಳುವಷ್ಟರಲ್ಲೇ ಮಂಗಳವಾರ ಇನ್ನೊಂದು ಬಾಂಬ್ ಸ್ಫೋಟದಿಂದ ಪಾಕಿಸ್ತಾನ ತಲ್ಲಣಿಸುವಂತೆ ಮಾಡಿದೆ.
ಈ ಬಾರಿ ರಾವಲ್ಪಿಂಡಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಗಾರಿಸನ್ ನಗರದ ವಿಐಪಿ ಪ್ರದೇಶದಲ್ಲಿರುವ ಅಯೂಬ್ ಖಾನ್ ಪಾರ್ಕ್‌ನಲ್ಲಿ ಬಾಂಬ್ ಸ್ಪೋಟಿಸಲಾಯಿತೆಂದು ಹೇಳಲಾಗಿದೆ.
ಈ ಸ್ಫೋಟದಲ್ಲಿ 6 ಮಂದಿ ಸತ್ತಿದ್ದಾರೆಂದು ಶಂಕಿಸಲಾಗಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಸೇನೆಯ ಮುಖ್ಯಕೇಂದ್ರಕ್ಕೆ ಅತೀ ಸಮೀಪದಲ್ಲೇ ನಿಲ್ಲಿಸಿದ್ದ ವಾಹನದಲ್ಲಿ ಈ ಸ್ಫೋಟ ಉಂಟಾಗಿದೆ.
ನ್ಯೂಸ್‌ವೀಕ್ ನಿಯತಕಾಲಿಕದಲ್ಲಿ ಪ್ರಕಟವಾದ ಪಾಕಿಸ್ತಾನ ಅತ್ಯೆಂತ ಅಪಾಯಕಾರಿ ರಾಷ್ಟ್ರ ಎಂಬ ಲೇಖನವನ್ನು ಪಾಕಿಸ್ತಾನ ಸರ್ಕಾರ ಖಂಡಿಸಿದ ಮರುದಿನವೇ ಈ ಸ್ಫೋಟ ಸಂಭವಿಸಿರುವುದು ಕಾಕತಾಳೀಯ.
|