ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಕ್ಲಿಂಟನ್ ಲೈಂಗಿಕ ವ್ಯಸನಿ: ಫೋರ್ಡ್
ಬಿಲ್ ಕ್ಲಿಂಟನ್ ಒಬ್ಬ ಲೈಂಗಿಕ ವ್ಯಸನಿ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಪರಿಗಣಿಸಿ, ತಕ್ಷಣವೇ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರು.ಬಿಲ್ ಕ್ಲಿಂಟನ್ ಅಸ್ವಸ್ಥತೆಯುಳ್ಳ ಲೈಂಗಿಕ ವ್ಯಸನಿ. ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಶ್ವೇತಭವನದ ಸಹಾಯಕಿ ಮೋನಿಕಾ ಲೆವೆನ್‌ಸ್ಕಿ ಜತೆ ಕ್ಲಿಂಟನ್ ಅವರ ಕುಖ್ಯಾತ ಲೈಂಗಿಕ ಹಗರಣಗಳು ಬಯಲಾದ ಬಳಿಕ 1999ರಲ್ಲಿ ಪೋರ್ಡ್ ಡಿಫ್ರಾಂಕ್‌ಗೆ ತಿಳಿಸಿದ್ದರು.

ಡೇಲಿ ನ್ಯೂಸ್‌ನ ವಾಷಿಂಗ್‌ಟನ್ ಬ್ಯೂರೊ ಮುಖ್ಯಸ್ಥ ಡಿ ಫ್ರಾಂಕ್‌ಗೆ ಅನೇಕ ಸಂದರ್ಶನಗಳನ್ನು ಪೋರ್ಡ್ ನೀಡಿದ್ದರು. ಡಿ. ಫ್ರಾಂಕ್ ಅವುಗಳನ್ನು ತಮ್ಮ ನಿಧನದ ಬಳಿಕ ಪ್ರಕಟಿಸಬೇಕೆಂಬ ಷರತ್ತಿನೊಂದಿಗೆ ಫೋರ್ಡ್ ಸಂದರ್ಶನಗಳನ್ನು ನೀಡಿದ್ದರು.

ಕ್ಲಿಂಟನ್ ದಂಪತಿಯನ್ನು 1993ರಲ್ಲಿ ಭೇಟಿ ಮಾಡಿದ್ದ ಫೋರ್ಡ್ ದಂಪತಿ ಬಿಲ್‌ಗೆ ಈ ಕುರಿತು ಸಹಾಯ ಮಾಡುವ ಪ್ರಸ್ತಾಪ ಮಾಡಿದ್ದರು. ಅಂತಹ ದುರ್ವ್ಯಸನಕ್ಕೆ ಚಿಕಿತ್ಸೆ ಇರುತ್ತದೆ ಎಂದು ಫೋರ್ಡ್ ಪತ್ನಿ ಬೆಟ್ಟಿ ಡಿ ಫ್ರಾಂಕ್‌ಗೆ ತಿಳಿಸಿದ್ದರು. ಅನೇಕ ಮಂದಿ ಈ ಚಿಕಿತ್ಸೆಯಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕ್ಲಿಂಟನ್ ಲೈಂಗಿಕ ಹಗರಣವನ್ನು ನಿರಾಕರಿಸಿದ್ದರಿಂದ ಅದಕ್ಕೆ ಒಪ್ಪಲಿಲ್ಲ ಎಂದು ಅವರು ಹೇಳಿದ್ದಾರೆ.

ಲೆವೆನ್‌ಸ್ಕಿ ಜತೆ ಲೈಂಗಿಕ ಹಗರಣದ ಕೋಲಾಹಲದ ನಡುವೆ ಕ್ಲಿಂಟನ್‌ಗೆ ಸಹಾಯ ಮಾಡುವ ಪ್ರಸ್ತಾಪವನ್ನು ಮಾಡಿ ತಾವು ಸುಳ್ಳುಹೇಳುತ್ತಿರುವುದನ್ನು ಒಪ್ಪಿಕೊಳ್ಳುವಂತೆ ಫೋರ್ಡ್ ತಿಳಿಸಿದ್ದರು. ಆದರೆ ಕ್ಲಿಂಟನ್ ತಮ್ಮ ಸುಳ್ಳನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಎಂದು ಗೆರಾರ್ಡ್ ಫೋರ್ಡ್ ಹೇಳಿದರು.
ಮತ್ತಷ್ಟು
ನೈಜೀರಿಯ: ನಾಲ್ವರು ಭಾರತೀಯರ ಬಿಡುಗಡೆ
ರಾವಲ್ಪಿಂಡಿಯಲ್ಲಿ ಸ್ಫೋಟ:6 ಸಾವು
8 ನಿಮಿಷದಲ್ಲಿ 103 ಹ್ಯಾಂಬರ್ಗರ್ ಗುಳುಂ!
ಡಾ. ಹಮೀದ್ 2007ನೇ ಸಾಲಿನ ಏಷ್ಯನ್
ಭಾರತ ಒಪ್ಪಂದಗಳಿಗೆ ಸದಾ ಬದ್ದ : ಪ್ರಧಾನಿ
ಮುಷರಫ್‌ಗೆ ಸು.ಕೋ ತೀರ್ಪು ಅನ್ವಯವಾಗುವುದಿಲ್ಲ