ರಾಜ್ಯ ಕಾರ್ಯದರ್ಶಿ ಕಾಂಡೊಲಿಜಾ ರೈಸ್ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ, ಭಾರತ ಅಮೆರಿಕ ಪರಮಾಣು ಒಪ್ಪಂದದ ವಿಚಾರದಲ್ಲಿ ಬುಷ್ ಆಡಳಿತವು ದೆಹಲಿಯೊಂದಿಗೆ ಯಾವುದೇ ಉನ್ನತ ಮಟ್ಟದ ಸಂಪರ್ಕವನ್ನು ಹೊಂದುವುದಿಲ್ಲ ಎಂದು ರಾಜ್ಯ ವಿಭಾಗದ ವಕ್ತಾರ ಸೀನ್ ಮೆಕ್‌ಕಾರ್ಮೆಕ್ ಹೇಳಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರ " ಒಪ್ಪಂದವು ವಿಳಂಬಗೊಂಡಿದೆ ಸ್ಥಗಿತಗೊಂಡಿಲ್ಲ" ಎಂಬ ಮಾತಿಗೆ ಟೀಕಿಸುತ್ತಾ ಸೀನ್ ಈ ವಿಷಯವನ್ನು ತಿಳಿಸಿದರು.
ಪರಮಾಣು ಒಪ್ಪಂದದ ಬಗ್ಗೆ ರಾಯಭಾರಿ ಮಲ್ಫಾರ್ಡ್ ಅವರು ಭಾರತ ಸರಕಾರದೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದ್ದಾರೆ ಎಂಬ ಭರವಸೆಯನ್ನು ಹೊಂದಿದ್ದೇನೆ ಎಂದು ಹೇಳಿದ ಅವರು, ರಾಜ್ಯ ವಿಭಾಗದ ಪ್ರಕಾರ, ಸೋಮವಾರ ರೈಸ್ ಅವರೊಂದಿಗೆ ನಡೆಸಿದ ದೂರವಾಣಿ ಮಾತುಕತೆಯು ಇತ್ತೀಚಿನ ಉನ್ನತ ಮಟ್ಟದ ಮಾತುಕತೆಯಾಗಿದೆ ಎಂದರು.
ಭಾರತ ಸರಕಾರವು ಒಪ್ಪಂದವನ್ನು ಮುಂದುವರಿಸಲು ನಡೆಸುವ ಪ್ರಯತ್ನವನ್ನು ನಾವು ಬೆಂಬಲಿಸುತ್ತೇವೆ. ಆದರೆ ಭಾರತ ಸರಕಾರವು ತೀವ್ರ ಪ್ರಾದೇಶಿಕ ರಾಜಕೀಯ ವಾಗ್ವಾದದ ಮೂಲಕ ಕಾರ್ಯ ನಡೆಸುತ್ತಿದೆ. ಏನೇ ಆದರೂ ನಾವು ಒಪ್ಪಂದವನ್ನು ಮುಂದುವರಿಸಲು ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.
|