ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ವಜಾಗೊಂಡ ಮಹಿಳೆಗೆ 5.57 ದಶಲಕ್ಷ ಡಾಲರ್
ಬೃಹತ್ ತೈಲ ಕಂಪೆನಿ ಚೆವರಾನ್‌ನಲ್ಲಿ ಕೆಲಸದಲ್ಲಿದ್ದ ತಮ್ಮನ್ನು ವರ್ಣಭೇದದ ಕಾರಣಕ್ಕಾಗಿ ಕೆಲಸದಿಂದ ವಜಾ ಮಾಡಲಾಯಿತೆಂದು ಕೋರ್ಟ್ ಮೊರೆ ಹೋಗಿದ್ದ ಭಾರತೀಯ ಸಂಜಾತ ಅಮೆರಿಕದ ಎಂಜಿನಿಯರ್ ಮಹಿಳೆಗೆ 5.57 ದಶಲಕ್ಷ ಡಾಲರ್ ಹಣ ನೀಡುವಂತೆ ನ್ಯಾಯಾಧೀಶರು ಚೆವರಾನ್ ಕಂಪೆನಿಗೆ ಆದೇಶಿಸಿದ್ದಾರೆ.

ಸೂಪರ್‌ವೈಸರ್ ವಿರುದ್ಧ ತಾವು ದುರ್ನಡತೆಯ ದೂರು ನೀಡಿದ್ದರಿಂದ ತಮ್ಮನ್ನು ವಜಾ ಮಾಡಲಾಯಿತೆಂಬ ಅವರ ವಾದವನ್ನು ಸ್ವೀಕರಿಸಿದ ನ್ಯಾಯಾಧೀಶರು ಮೇಲಿನ ಆದೇಶ ನೀಡಿದ್ದಾರೆ. ವಜಾ ಮಾಡಿದ ಕೆಲವು ತಿಂಗಳ ಬಳಿಕ ಕೋರ್ಟ್ ಮೊರೆ ಹೋದ ಪಾಂಡೆ ತಮ್ಮ ಪರಂಪರೆಯ ವಿರುದ್ಧ ಸೂಪರ್‌ವೈಸರ್ ರೆಕ್ಸ್ ಮಿಚೆಲ್ ಎಂಬವರು ಜನಾಂಗೀಯ ನಿಂದನೆ ಮಾಡಿದ್ದರೆಂದು ಆರೋಪಿಸಿದರು.

ಆಕೆಯ ಪರವಾಗಿ ತೀರ್ಪು ನೀಡಿದ ಕೋರ್ಟ್ ಅವರಿಗಾದ ಆರ್ಥಿಕ ಹಾನಿಗಾಗಿ 2.5 ದಶಲಕ್ಷ ಡಾಲರ್ ಹಣವನ್ನು ನೀಡುವಂತೆ ಚೆವರಾನ್ ಕಂಪನಿಗೆ ಆದೇಶಿಸಿತು. ಪಾಂಡೆಗೆ ಉಂಟಾಗಿರುವ ನಷ್ಟಕ್ಕಾಗಿ ಚೆವರಾನ್ 3.07 ದಶಲಕ್ಷ ಡಾಲರ್ ನೀಡುವಂತೆ ಕೂಡ ನ್ಯಾಯಾಧೀಶರು ಆದೇಶಿಸಿದರು.
ಮತ್ತಷ್ಟು
90 ಭಾರತೀಯರ ಮೇಲೆ ಪ್ರಕರಣ ದಾಖಲು
ಉನ್ನತ ಮಟ್ಟದ ಸಂಪರ್ಕವಿಲ್ಲ:ಮೆಕ್‌ಕಾರ್ಮೆಕ್
ಕ್ಲಿಂಟನ್ ಲೈಂಗಿಕ ವ್ಯಸನಿ: ಫೋರ್ಡ್
ನೈಜೀರಿಯ: ನಾಲ್ವರು ಭಾರತೀಯರ ಬಿಡುಗಡೆ
ರಾವಲ್ಪಿಂಡಿಯಲ್ಲಿ ಸ್ಫೋಟ:6 ಸಾವು
8 ನಿಮಿಷದಲ್ಲಿ 103 ಹ್ಯಾಂಬರ್ಗರ್ ಗುಳುಂ!