8 ವರ್ಷಗಳ ಸ್ವಯಂ ದೇಶಭ್ರಷ್ಟತೆ ಬಳಿಕ ಪಾಕಿಸ್ತಾನಕ್ಕೆ ಹಿಂತಿರುಗಿದ ಕೇವಲ ಎರಡು ವಾರಗಳಲ್ಲೇ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಗುರುವಾರ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಏರ್‌ಲೈನ್ ಮತ್ತು ಪಕ್ಷದ ಅಧಿಕಾರಿಗಳು ತಿಳಿಸಿದ್ದಾರೆ.
ಅ.18ರಂದು ಸ್ವದೇಶಕ್ಕೆ ಹಿಂತಿರುಗಿದ ಬಳಿಕ 145 ಜನರನ್ನು ಬಲಿತೆಗೆದುಕೊಂಡ ಬಾಂಬ್ ಸ್ಫೋಟದ ಬಳಿಕ ಅವರ ಪ್ರವಾಸ ಯೋಜನೆ ಗೊಂದಲಕ್ಕೆ ಮೂಲವಾಗಿದೆ. ಪಾಕಿಸ್ತಾನ ಸರ್ಕಾರ ತನ್ನ ಗೈರಿನಲ್ಲಿ ತುರ್ತು ಸ್ಥಿತಿ ಘೋಷಿಸಬಹುದೆಂದು ಶಂಕಿಸಿರುವ ಆಕೆ ಬುಧವಾರ ತಡರಾತ್ರಿಯಲ್ಲಿ ಅರಬ್ ಸಂಯುಕ್ತಸಂಸ್ಥಾನದಲ್ಲಿರುವ ತನ್ನ ಕುಟುಂಬವನ್ನು ಕಾಣಲು ಹೋಗುವ ಯೋಜನೆಯನ್ನು ಮುಂದೂಡಿದ್ದಾಗಿ ಅವರು ತಿಳಿಸಿದ್ದರು.
ಆದರೆ ಕರಾಚಿಯ ಅವರ ನಿವಾಸದ ವಕ್ತಾರ ಜೈಮಿಲ್ ಸೂಮ್ರೋ ಭುಟ್ಟೊ ದುಬೈಗೆ ತೆರಳಿದ್ದಾಗಿ ಹೇಳಿದರು. ಮಧ್ಯಾಹ್ನಕ್ಕೆ 2.10ಕ್ಕೆ ಕರಾಚಿಯಿಂದ ನಿರ್ಗಮಿಸಿದ ಅವರು ಎಮೈರೇಟ್ಸ್ ವಿಮಾನ ಏರಿದ್ದಾರೆಂದು ವಿಮಾನನಿಲ್ದಾಣದ ಅಧಿಕಾರಿ ಖಚಿತಪಡಿಸಿದ್ದಾರೆ.
|