ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ರಾಜೀನಾಮೆಗೆ ಕಾರಣವಾದ ಮುತ್ತು
ಸ್ಟಾಕ್‌ಹಾಮ್ ಬಾರ್‌ನಲ್ಲಿ ಒಂದು ಮುತ್ತಿನಿಂದ ಆರಂಭವಾದ ವಿವಾದವು ಗುರುವಾರ ಸ್ವೀಡನ್ ಸರ್ಕಾರ ಪೇಚಿನ ಸ್ಥಿತಿಯನ್ನು ಎದುರಿಸುವಂತಾಗಿ ಪ್ರಧಾನ ಮಂತ್ರಿಗಳ ಹಿರಿಯ ಸಹಾಯಕಿ ರಾಜೀನಾಮೆ ನೀಡಬೇಕಾದ ಸ್ಥಿತಿ ಉದ್ಭವಿಸಿತು.

ಪ್ರಧಾನಮಂತ್ರಿಗಳ ಕಚೇರಿಯ ಉನ್ನತ ಅಧಿಕಾರಿಣಿ ಅಲ್‌ರಿಕಾ ಸ್ಕೆನ್‌ಸ್ಟಾರ್ಮ್ ತಾನು ಪತ್ರಕರ್ತನ ಜತೆ ಸಂಭಾಷಣೆಯಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ವೈನ್ ಕುಡಿದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ಕರ್ತವ್ಯದ ಮೇಲಿದ್ದರೇ ಎಂಬುದನ್ನು ಅವರು ಬಹಿರಂಗಮಾಡಲಿಲ್ಲ.

ಕಳೆದ ವಾರ ಸ್ಕೆನ್‌ಸ್ಟಾರ್ಮ್ ವೈನ್ ಕುಡಿಯುತ್ತಾ ರಾಜಕೀಯ ವರದಿ ಮಾಡುವ ಪತ್ರಕರ್ತನಿಗೆ ಮುತ್ತು ನೀಡಿದ್ದನ್ನು ಸ್ವೀಡಿಷ್ ವಾರಪತ್ರಿಕೆ ಪ್ರಕಟಿಸಿತ್ತು. ಕೆಲವು ಗ್ಲಾಸ್ ವೈನ್ ಕುಡಿದಿದ್ದು ನಿಜ ಎಂದು ವರದಿಗಾರ ಆಂಡರ್ಸ್ ಫಿಲ್‌ಬ್ಲಾಡ್ ಬಹಿರಂಗಮಾಡಿದ್ದಾರೆ. ಆದರೆ ಸ್ಕೆನ್‌ಸ್ಟಾರ್ಮ್ ಜತೆ ತಾವೇನೂ ಸಂಬಂಧ ಹೊಂದಿಲ್ಲ ಎಂದು ಹೇಳಿದ ಅವರು ತಮ್ಮದು ಅವಿವೇಕಿ ಕ್ರಮ ಎಂದು ಒಪ್ಪಿಕೊಂಡಿದ್ದಾರೆ
.
2006 ಅಕ್ಟೋಬರ್‌ನಲ್ಲಿ ಪ್ರಧಾನಿ ರೈನ್‌ಫೆಲ್ಡ್ ಅಧಿಕಾರ ವಹಿಸಿಕೊಂಡ ಬಳಿಕ ಅನೇಕ ಹಗರಣಗಳಲ್ಲಿ ಸರ್ಕಾರದ ಸಚಿವರು ಭಾಗಿಯಾದ ಆರೋಪಗಳು ಮುಖಪುಟಗಳಲ್ಲಿ ರಾರಾಜಿಸಿದೆ. ಇಬ್ಬರು ಸಚಿವರು ಕಡ್ಡಾಯ ಟಿವಿ ಪರವಾನಗಿ ಶುಲ್ಕಗಳನ್ನು ನಿರ್ಲಕ್ಷ್ಯ ಮಾಡಿದ್ದನ್ನು ಮಾಧ್ಯಮದ ವರದಿಗಳು ಬಹಿರಂಗಮಾಡಿದ್ದರಿಂದ ಅವರು ರಾಜೀನಾಮೆ ನೀಡಿದ್ದರು.
ಮತ್ತಷ್ಟು
ಭುಟ್ಟೊ ಮನಸ್ಸು ಬದಲು:ದುಬೈಗೆ ಪ್ರಯಾಣ
ಮೂವರು ಆರೋಪಿಗಳಿಗೆ 120,755 ವರ್ಷ ಶಿಕ್ಷೆ
ಇಫ್ತಿಕರ್ ಚೌಧರಿ ಮೇಲೆ ಹಲ್ಲೆಗೆ ಜೈಲುಶಿಕ್ಷೆ
ವಾಯುದಾಳಿ:6 ಎಲ್‌ಟಿಟಿಇ ಉಗ್ರರ ಸಾವು
ಪಾಕ್‌ನಲ್ಲಿ 11 ಆತ್ಮಹತ್ಯೆ ಬಾಂಬರ್‌ಗಳು
ಮಕ್ಕಳು ಸೈನ್ಯಕ್ಕೆ :ಬರ್ಮದ ಸೇನೆಯ ನಿರ್ದಯತೆ