ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಭಾರತ ಮೂಲದ "ಡಾಕ್ಟರ್ ಡೆತ್" ಬಂಧನ ಸನ್ನಿಹಿತ
"ಡಾಕ್ಟರ್ ಡೆತ್" (ಸಾವಿನ ವೈದ್ಯ) ಎಂದೇ ಕುಖ್ಯಾತಿ ಗಳಿಸಿರುವ ಭಾರತೀಯ ಮೂಲಕ ಸರ್ಜನ್ ಜಯಂತ್ ಪಟೇಲ್ ಬಂಧನ ಸಾಧ್ಯತೆ ಬಹುತೇಕ ಖಚಿತವಾಗಿದ್ದು, ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್ ಸರಕಾರವು ಆತನ ಮೇಲಿರುವ ಕೇಸಿನ ಪ್ರಗತಿಯ ಬಗ್ಗೆ ವಿಚಾರಿಸಿದೆ.

17 ರೋಗಿಗಳ ಹತ್ಯೆಯ ಆರೋಪ ಹೊತ್ತಿರುವ ಆತನ ಗಡೀಪಾರು ಪ್ರಕ್ರಿಯೆಗೆ ಈಗಾಗಲೇ ಅಮೆರಿಕದಲ್ಲಿ ಚಾಲನೆ ದೊರೆತಿದ್ದು, ಒಂದು ವಾರದೊಳಗೆ ವೈದ್ಯನನ್ನು ಬಂಧಿಸಲಾಗುತ್ತದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಆಗ್ನೇಯ ಕ್ವೀನ್ಸ್‌ಲೆಂಡ್‌ನ ಬುಂದಾಬರ್ಗ್ ಬೇಸ್ ಆಸ್ಪತ್ರೆಯ ಸರ್ಜರಿ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಪಟೇಲ್, ಈ ಕೊಲೆ ಆರೋಪ ಬಂದ ಬಳಿಕ 2005ರ ಏಪ್ರಿಲ್ ತಿಂಗಳಲ್ಲಿ ಅಮೆರಿಕಕ್ಕೆ ಪರಾರಿಯಾಗಿದ್ದ.

ನರಮೇಧ ಆರೋಪಕ್ಕೆ ಸಂಬಂಧಿಸಿದಂತೆ ಆತನನ್ನು ತಮ್ಮ ದೇಶಕ್ಕೆ ಗಡೀಪಾರು ಮಾಡಬೇಕೆಂಬ ಆಸ್ಟ್ರೇಲಿಯಾದ ಕೋರಿಕೆಯನ್ನು ಅಮೆರಿಕ ಅಧಿಕಾರಿಗಳು ಪರಿಗಣಿಸಿದ್ದು, ಗಡೀಪಾರು ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಮತ್ತಷ್ಟು
ರಾಜೀನಾಮೆಗೆ ಕಾರಣವಾದ ಮುತ್ತು
ಭುಟ್ಟೊ ಮನಸ್ಸು ಬದಲು:ದುಬೈಗೆ ಪ್ರಯಾಣ
ಮೂವರು ಆರೋಪಿಗಳಿಗೆ 120,755 ವರ್ಷ ಶಿಕ್ಷೆ
ಇಫ್ತಿಕರ್ ಚೌಧರಿ ಮೇಲೆ ಹಲ್ಲೆಗೆ ಜೈಲುಶಿಕ್ಷೆ
ವಾಯುದಾಳಿ:6 ಎಲ್‌ಟಿಟಿಇ ಉಗ್ರರ ಸಾವು
ಪಾಕ್‌ನಲ್ಲಿ 11 ಆತ್ಮಹತ್ಯೆ ಬಾಂಬರ್‌ಗಳು