ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ನ.6ರೊಳಗೆ ಪಾಕ್ ಸುಪ್ರೀಂಕೋರ್ಟ್ ತೀರ್ಪು
WDWD
ಅಧ್ಯಕ್ಷ ಮುಷರ್ರಫ್ ಅವರು ಸಮವಸ್ತ್ರದಲ್ಲಿ ಅಧ್ಯಕ್ಷರಾಗಿ ಮರುಆಯ್ಕೆಯಾದ ಬಗ್ಗೆ ಪ್ರಶ್ನಿಸಿದ ಅರ್ಜಿಗಳಿಗೆ ನ.6ರೊಳಗೆ ತೀರ್ಪು ನೀಡುವುದಾಗಿ ಪಾಕಿಸ್ತಾನ ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ. ಈ ನಡುವೆ ಸರ್ಕಾರದ ಉನ್ನತ ವಕೀಲರೊಬ್ಬರು ಸೇನಾಡಳಿತ ಹೇರುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಷರ್ರಫ್ ಅವರ ಪ್ರಸಕ್ತ ಅಧಿಕಾರಾವಧಿ ನ.15ರಂದು ಕೊನೆಗೊಳ್ಳುತ್ತದೆ. ಅ.6ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಸ್ಪರ್ಧಿಸಿದ ಕ್ರಮಬದ್ಧತೆ ಕುರಿತು ನಿರ್ಧರಿಸುವಲ್ಲಿ ಕೋರ್ಟ್ ವಿಳಂಬದಿಂದ ಮಿಲಿಟರಿ ಕಾನೂನು ಅಥವಾ ತುರ್ತು ಪರಿಸ್ಥಿತಿ ಹೇರಬಹುದೆಂಬ ಊಹಾಪೋಹಗಳಿಗೆ ಅವಕಾಶ ಕಲ್ಪಿಸಿದೆ.

ಆದರೆ ಅಟಾರ್ನಿ ಜನರಲ್ ಮಲಿಕ್ ಕಯಾಮ್ ಅದನ್ನು ಅಲ್ಲಗಳೆದು ಸೇನಾಡಳಿತ ಜಾರಿಗೆ ತರುವ ಇಚ್ಛೆಯಿಲ್ಲ ಎಂದು ತಿಳಿಸಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ಐತಾಜ್ ಅಹಸನ್ ಕೋರ್ಟ್ ಒತ್ತಡದಲ್ಲಿದ್ದು, ನ.12ರವರೆಗೆ ಕೇಸ್ ಮುಂದೂಡುವ ನಿರ್ಧಾರವನ್ನು ಬದಲಿಸಬಾರದೆಂದು ತಿಳಿಸಿದರು.

ವಾರಾಂತ್ಯದಲ್ಲಿ ತಮಗೆ ವಿಚಾರಣೆಗೆ ಹಾಜರಾಗಲು ಸಾದ್ಯವಾಗದಿರಬಹುದು ಎಂದು ಅವರು ಇಂಗಿತ ನೀಡಿದರು. ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ಅದನ್ನು ವಿರೋಧಿಸಿ ವಿಷಯವನ್ನು ಇತ್ಯರ್ಥ ಮಾಡುವಾಗ ಕೋರ್ಟ್ ಯಾವುದೇ ಒತ್ತಡಗಳಿಗೆ ಒಳಗಾಗುವುದಿಲ್ಲ ಎಂದು ಮನವರಿಕೆ ಮಾಡಿದರು.

ಸೇನಾ ಮುಖ್ಯಸ್ಥರ ಹುದ್ದೆ ತ್ಯಜಿಸದೆಯೇ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದಿದ್ದರೇ ಎಂದು ನಿರ್ಧರಿಸುವ ಸಂದರ್ಭದಲ್ಲಿ ಸೇನಾಡಳಿತವನ್ನು ಹೇರುವ ಬೆದರಿಕೆಗಳಿಗೆ ತಾವು ಮಣಿಯುವುದಿಲ್ಲ ಎಂದು ಪೀಠವು ಗುರುವಾರ ತಿಳಿಸಿತ್ತು.

ಪಿಎಂಎಲ್-ಕ್ಯೂನ ಉನ್ನತನಾಯಕರು ಗುರುವಾರ ರಾತ್ರಿ ಬಹುಹೊತ್ತಿನವರೆಗೆ ಬಿರುಸಿನ ಮಾತುಕತೆ ನಡೆಸಿ ಸೇನಾಡಳಿತ ಅಥವಾ ತುರ್ತುಪರಿಸ್ಥಿತಿ ಹೇರದಂತೆ ಮುಷರ್ರಫ್‌ಗೆ ಸಲಹೆ ಮಾಡಿದ್ದರು.ಇಂತಹ ಕ್ರಮದಿಂದ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಭವಿಷ್ಯಕ್ಕೆ ಪೆಟ್ಟು ಬೀಳುತ್ತದೆ ಎಂದು ಅವರು ನುಡಿದಿದ್ದರು.
ಮತ್ತಷ್ಟು
ಭಾರತ ಮೂಲದ "ಡಾಕ್ಟರ್ ಡೆತ್" ಬಂಧನ ಸನ್ನಿಹಿತ
ರಾಜೀನಾಮೆಗೆ ಕಾರಣವಾದ ಮುತ್ತು
ಭುಟ್ಟೊ ಮನಸ್ಸು ಬದಲು:ದುಬೈಗೆ ಪ್ರಯಾಣ
ಮೂವರು ಆರೋಪಿಗಳಿಗೆ 120,755 ವರ್ಷ ಶಿಕ್ಷೆ
ಇಫ್ತಿಕರ್ ಚೌಧರಿ ಮೇಲೆ ಹಲ್ಲೆಗೆ ಜೈಲುಶಿಕ್ಷೆ
ವಾಯುದಾಳಿ:6 ಎಲ್‌ಟಿಟಿಇ ಉಗ್ರರ ಸಾವು