ಉತ್ತರ ಇರಾಕಿನಿಂದ ಕುರ್ದಿ ಬಂಡುಕೋರರು ಟರ್ಕಿ ಮೇಲೆ ನಡೆಸುವ ದಾಳಿಗೆ ಅಮೆರಿಕ, ಟರ್ಕಿ ಮತ್ತು ಇರಾಕ್ ಪ್ರತಿರೋಧ ಒಡ್ಡಲಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಕಂಡೋಲೀಜಾ ರೈಸ್ ಹೇಳಿದ್ದಾರೆ.
ಟರ್ಕಿ ಮತ್ತು ಮಧ್ಯಪೂರ್ವ ರಾಷ್ಟ್ರಗಳಿಗೆ ರಾಜತಾಂತ್ರಿಕ ಭೇಟಿಗೆ ತೆರಳುವ ಮಾರ್ಗದಲ್ಲಿ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು, ಟರ್ಕಿ-ಇರಾನ್ ಗಡಿಯಲ್ಲಿ ಸ್ಫೋಟಕ ಪರಿಸ್ಥಿತಿ ಉದ್ಭವಿಸುವುದರ ವಿರುದ್ಧ ಅವರು ಎಚ್ಚರಿಸಿದರು.
ರೈಸ್ ಶುಕ್ರವಾರ ಟರ್ಕಿ ಪ್ರಧಾನಮಂತ್ರಿ ರಿಸೆಪ್ ತೈಯಿಪ್ ಎರ್ಡೋಗಾನ್ ಅವರನ್ನು ಭೇಟಿ ಮಾಡಿದರು.ಟರ್ಕಿ ಗಡಿಯಾಚೆ ಕುರ್ದಿ ಗೆರಿಲ್ಲಾಗಳ ವಿರುದ್ಧ ಹೋರಾಟಕ್ಕೆ ಉತ್ತರ ಇರಾಕಿಗೆ ಪಡೆಗಳನ್ನು ಕಳಿಸುವುದನ್ನು ತಪ್ಪಿಸುವ ಅಭಿಯಾನದ ಭಾಗವಾಗಿ ರೈಸ್ ಅಲ್ಲಿಗೆ ಭೇಟಿ ನೀಡಿದ್ದರು.ಇರಾಕಿ ಕುರ್ದಿಗಳು ಮತ್ತು ಟರ್ಕಿ ಉಲ್ಬಣಿಸಿರುವ ಸಂಘರ್ಷದಿಂದ ಹಿಂದೆ ಸರಿಯಬೇಕೆಂದು ಅವರು ಹೇಳಿದ್ದಾರೆ.
|