ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸರ್ಕಾರದ ಕಣ್ಣು ಕುರುಡು:ಭುಟ್ಟೊ ಟೀಕೆ
PTI
ಬುಡಕಟ್ಟು ಪ್ರದೇಶಗಳಲ್ಲಿ ಶಸ್ತ್ರಸಜ್ಜಿತರ ಗುಂಪು ಸೇರುತ್ತಿರುವ ಬಗ್ಗೆ ಕಣ್ಣು ಕುರುಡಾಗಿರುವ ಸರ್ಕಾರವನ್ನು ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ತರಾಟೆಗೆ ತೆಗೆದುಕೊಂಡರು. ಅದರ ಫಲವಾಗಿ ಸರ್ಕಾರಿ ಪಡೆಗಳು ಮತ್ತು ತಾಲಿಬಾನ್ ಪರ ಉಗ್ರಗಾಮಿಗಳ ನಡುವೆ ಸಂಘರ್ಷ ಉಲ್ಬಣಿಸಿದೆ ಎಂದು ನುಡಿದರು,

ನಮ್ಮ ಬುಡಕಟ್ಟು ಪ್ರದೇಶಗಳು ಹತೋಟಿ ತಪ್ಪಿವೆಯಲ್ಲದೇ, ಸುಂದರವಾದ ಸ್ವಾಟ್ ಪ್ರದೇಶ ಕೂಡ ಉಗ್ರರ ಸ್ವಾಧೀನದಲ್ಲಿದೆ ಎಂದು ಭುಟ್ಟೊ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸರ್ಕಾರಿ ಪಡೆಗಳು ಮತ್ತು ತಾಲಿಬಾನ್ ಪಡೆಗಳ ನಡುವೆ ಕದನದಿಂದ ಮುಷರ್ರಫ್ ಅವರಿಗೆ ಸೇನಾಡಳಿತ ತರಲು ಪ್ರೇರೇಪಣೆ ನೀಡಬಹುದೆಂಬ ಶಂಕೆಗಳ ನಡುವೆ ಅವರ ಪ್ರತಿಕ್ರಿಯೆ ಹೊರಬಿದ್ದಿದೆ.

140ಜನರನ್ನು ಬಲಿತೆಗೆದುಕೊಂಡ ಭಯಾನಕ ಬಾಂಬ್ ಸ್ಫೋಟದ ಘಟನೆಯನ್ನು ಅವರು ಖಂಡಿಸಿದರು. ತನ್ನ ಕೊಲೆ ಯತ್ನದಲ್ಲಿ ಭಾಗಿಯಾಗಿರಬಹುದೆಂದು ಶಂಕಿಸಿ ಮೂವರು ವ್ಯಕ್ತಿಗಳನ್ನು ಮುಷರ್ರಫ್‌ಗೆ ಬರೆದಿರುವ ಪತ್ರದಲ್ಲಿ ಹೆಸರಿಸಿರುವುದಾಗಿ ಅವರು ಖಚಿತಪಡಿಸಿದರು.

ಸ್ಫೋಟ ನಡೆದಾಗ ತಮ್ಮ ಮಕ್ಕಳು ನಿದ್ರಾವಶರಾಗಿದ್ದರು. ನಿಮ್ಮ ತಾಯಿಗೆ ಅಪಾಯವಾಗಿಲ್ಲವೆಂದು ಆಶಿಸುವುದಾಗಿ ಬೆಳಿಗ್ಗೆ ಮಕ್ಕಳ ಸ್ನೇಹಿತರಿಂದ ಸಂದೇಶಗಳು ತಲುಪಿದ್ದವು ಎಂದು ಭುಟ್ಟೊ ಹೇಳಿದರು.
ಮತ್ತಷ್ಟು
ಕುರ್ದಿಗಳ ದಾಳಿಗೆ ಅಮೆರಿಕ ತಕ್ಕ ಉತ್ತರ
ತುರ್ತು ಪರಿಸ್ಥಿತಿಯತ್ತ ಪಾಕಿಸ್ತಾನ
ಶ್ರೀಲಂಕಾ ವಾಯುದಾಳಿಯಲ್ಲಿ ತಮಿಳುಸೆಲ್ವಂ ಹತ
ನ.6ರೊಳಗೆ ಪಾಕ್ ಸುಪ್ರೀಂಕೋರ್ಟ್ ತೀರ್ಪು
ಭಾರತ ಮೂಲದ "ಡಾಕ್ಟರ್ ಡೆತ್" ಬಂಧನ ಸನ್ನಿಹಿತ
ರಾಜೀನಾಮೆಗೆ ಕಾರಣವಾದ ಮುತ್ತು