ಹಿಂದೊಂದು ಕಾಲದಲ್ಲಿ ತಮಿಳು ಉಗ್ರಗಾಮಿ ಸಂಘಟನೆ-ಎಲ್‌ಟಿಟಿಇಯ ಪ್ರಮುಖ ನಾಯಕನಾಗಿದ್ದ ವಿನಾಯಕ ಮೂರ್ತಿ ಮುರಳಿಧರನ್ ಅಲಿಯಾಸ್ ಕರ್ನಲ್ ಕರುಣಾ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಹೆಸರಿನ ಪಾಸ್‌ಪೋರ್ಟ್ ಮೇಲೆ ಪ್ರಯಾಣ ಮಾಡುತ್ತಿದ್ದಾಗ ಅನುಮಾನಗೊಂಡ ಬ್ರಿಟನ್ ಪೊಲೀಸರು, ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಬ್ರಿಟನ್ ಗೃಹ ಸಚಿವಾಲಯದ ಮೂಲಗಳು ಹೇಳಿವೆ. ಮಾರ್ಚ್ 2004ರವರೆಗೂ ಎಲ್‌ಟಿಟಿಇ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಇವರು, ನಂತರ ಅದೇ ಸಂಘಟನೆ ವಿರುದ್ಧ ಹೋರಾಡುತ್ತಿದ್ದಾರೆ.
ಏತನ್ಮಧ್ಯೆ ಎಲ್‌ಟಿಟಿಇ ನಾಯಕರು ಪ್ರಮುಖ ಹೇಳಿಕೆಯೊಂದನ್ನು ನೀಡಿ, ನಮ್ಮ ಸಂಘಟನೆಯನ್ನು ಒಡೆಯುವ ಕಾರ್ಯದಲ್ಲಿ ಕರುಣಾ ತೊಡಗಿದ್ದಾರೆಂದು ಆರೋಪಿಸಿದ್ದಾರೆ.
ಎಲ್‌ಟಿಟಿಇ ವಿರುದ್ಧ ಸಿಡಿದುಬಿದ್ದು ಸರಕಾರದ ಪರವಾಗಿ ನಿಂತಿರುವ ಕರುಣಾ ಅವರನ್ನು ರಕ್ಷಿಸಲು ಶ್ರೀಲಂಕಾ ಸರಕಾರ ಮುಂದಾಗಿದ್ದು ಎಲ್‌ಟಿಟಿಇಗೆ ನುಂಗಲಾರದ ತುತ್ತಾಗಿದ್ದು, ಲಂಕಾ ಸರಕಾರದ ರಕ್ಷಣಾ ಕ್ರಮವನ್ನು ಅದು ಕಟುವಾಗಿ ಟೀಕಿಸಿದೆ.
|