ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಇರಾನ್ ದಾಳಿಯಿಂದ ಊಹಾತೀತ ಪರಿಣಾಮ
ಟೆಹರಾನ್ ವಿರುದ್ಧ ಯಾವುದೇ ದಾಳಿಯಿಂದ ಊಹಾತೀತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನಿನ ಮಾಜಿ ಅಧ್ಯಕ್ಷ ಅಕ್ಬರ್ ಹಶೇಮಿ ರಫ್ಸಂಜಾನಿ ಎಚ್ಚರಿಸಿದ್ದಾರೆ. ವಿಶ್ವವು ಸೊಕ್ಕಿದ ಶಕ್ತಿಗಳ ಜತೆ ಸೆಣೆಸುತ್ತಿದೆ.

ಅವುಗಳಿಗೆ ಬೇಕಾದ್ದೆಲ್ಲವೂ ಇದೆ. ಆದರೆ ಇನ್ನೂ ತೃಪ್ತಿಯಾಗದೇ ಉಳಿದ ರಾಷ್ಟ್ರಗಳ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿವೆ ಎಂದು ಪರೋಕ್ಷವಾಗಿ ಅಮೆರಿಕವನ್ನು ಉದ್ದೇಶಿಸಿ ಶುಕ್ರವಾರದ ಪ್ರಾರ್ಥನೆಯಲ್ಲಿ ತೊಡಗಿದ್ದವರಿಗೆ ಅವರು ಹೇಳಿದರು. ಇಂದು ಮಧ್ಯಪೂರ್ವ ರಾಷ್ಟ್ರ ಅವರ ಗಮನ ಸೆಳೆದಿದೆ ಮತ್ತು ಅವರ ಅಸೂಯಾಭರಿತ ಕಣ್ಣುಗಳು ಪ್ರಮುಖ ಪ್ರದೇಶದ ಮೇಲೆ ಬಿದ್ದಿದೆ ಎಂದು ಅವರು ಹೇಳಿದರು.

ಅಮೆರಿಕನ್ನರು ಸಾಹಸವನ್ನು ಬಯಸಿದ್ದರೆ ಅವರು ಗಂಭೀರ ತಪ್ಪೆಸಗುತ್ತಿರುವುದು ಜಗತ್ತಿಗೆ ಸದ್ಯದಲ್ಲೇ ಅರಿವಾಗುತ್ತದೆ ಎಂದು ಉನ್ನತ ಧರ್ಮಗುರು ಹೇಳಿದರು. ಇರಾಕ್, ಲೆಬನಾನ್ಸ ಆಫ್ಘಾನಿಸ್ತಾನ ಮತ್ತು ಪ್ಯಾಲೆಸ್ತೀನ್ ವಿರುದ್ಧ ಅಮೆರಿಕದ ಆಕ್ರಮಣಕಾರಿ ನೀತಿಯು ಮಧ್ಯಪೂರ್ವದ ಸೂಕ್ಷ್ಮ ಮತ್ತು ಪ್ರಮುಖ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಗುರಿ ಹೊಂದಿದೆ ಎಂದು ಅವರು ತಿಳಿಸಿದರು.

ಅಮೆರಿಕದ ಅಧಿಕಾರಿಗಳು ಬುದ್ಧಿವಂತಿಕೆಯಿಂದ ವರ್ತಿಸಿ ಬಿಕ್ಕಟ್ಟುಗಳಿಗೆ ಪರಿಹಾರವಾಗಿ ಮಾತುಕತೆಗಳಂತ ಸಮಂಜಸ ಮತ್ತು ಸಮರ್ಪಕ ನೀತಿಯನ್ನು ಆರಿಸುತ್ತಾರೆಂದು ಅವರು ಆಶಿಸಿದರು.
ಮತ್ತಷ್ಟು
ಬೇನಜೀರ್ ಭುಟ್ಟೊಗೆ ಹತ್ಯೆ ಬೆದರಿಕೆ
ಎಲ್‌ಟಿಟಿಇ ಮಾಜಿ ನಾಯಕ ಕರ್ನಲ್ ಕರುಣಾ ಬಂಧನ
ಸರ್ಕಾರದ ಕಣ್ಣು ಕುರುಡು:ಭುಟ್ಟೊ ಟೀಕೆ
ಕುರ್ದಿಗಳ ದಾಳಿಗೆ ಅಮೆರಿಕ ತಕ್ಕ ಉತ್ತರ
ತುರ್ತು ಪರಿಸ್ಥಿತಿಯತ್ತ ಪಾಕಿಸ್ತಾನ
ಶ್ರೀಲಂಕಾ ವಾಯುದಾಳಿಯಲ್ಲಿ ತಮಿಳುಸೆಲ್ವಂ ಹತ