ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಅದೃಶ್ಯ ಟ್ಯಾಂಕ್ ಪ್ರಯೋಗ ಯಶಸ್ವಿ
ಅದೃಶ್ಯ ಟ್ಯಾಂಕ್‌ನ ರಹಸ್ಯ ಪ್ರಯೋಗಗಳು ಯಶಸ್ವಿಯಾಗಿದ್ದು, 2012ರಲ್ಲಿ ಅವು ಸೇವೆಗೆ ಸಿದ್ಧವಾಗುತ್ತದೆಂದು ಬ್ರಿಟನ್ ರಕ್ಷಣಾ ಸಚಿವಾಲಯ ಭವಿಷ್ಯ ನುಡಿದಿದೆ. ಹೊಸ ತಂತ್ರಜ್ಞಾನದಲ್ಲಿ ಕ್ಯಾಮೆರಾ ಮತ್ತು ಪ್ರೊಜೆಕ್ಟರ್‌ಗಳನ್ನು ಬಳಸಿ ಸುತ್ತಲಿನ ಭೂದೃಶ್ಯದ ಪ್ರತಿಬಿಂಬಗಳನ್ನು ಟ್ಯಾಂಕ್ ಮೇಲೆ ಹಾಯಿಸಲಾಗುವುದು.

ಇದರ ಫಲವಾಗಿ ವಾಹನದ ಕಡೆ ವೀಕ್ಷಿಸುತ್ತಿರುವವರು ಅದರ ಹಿನ್ನೆಲೆಯನ್ನು ಮಾತ್ರ ಕಾಣಲು ಸಾಧ್ಯವಾಗುತ್ತದೆಯೇ ಹೊರತು ಟ್ಯಾಂಕ್ ಅದೃಶ್ಯವಾಗಿರುತ್ತದೆ. ಅಭ್ಯಾಸದ ಸಮಯದಲ್ಲಿ ಹಾಜರಿದ್ದ ಸೈನಿಕರೊಬ್ಬರು ಇದೊಂದು ಅದ್ಭುತ ತಂತ್ರಜ್ಞಾನ ಎಂದು ಉದ್ಘರಿಸಿದ್ದಾರೆ.

"ನಾನು ಇಲ್ಲಿ ಖುದ್ದಾಗಿ ಹಾಜರಿರದಿದ್ದರೆ ನಂಬಲು ಸಾಧ್ಯವಾಗುತ್ತಿರಲಿಲ್ಲ. ನಾನು ಸುತ್ತಲಿನ ಮೈದಾನವನ್ನು ವೀಕ್ಷಿಸಿದಾಗ ಬರೀ ಹುಲ್ಲು ಮತ್ತು ಮರಗಳು ಕಾಣಿಸಿತು. ಆದರೆ ನಾನು ವಾಸ್ತವವಾಗಿ ಟ್ಯಾಂಕ್‌ನ ಬಂದೂಕಿನ ನಳಿಕೆಯತ್ತ ವೀಕ್ಷಿಸುತ್ತಿದ್ದೆ" ಎಂದು ಅವರು ಉದ್ಗರಿಸಿದರು.

ಯುದ್ಧದಲ್ಲಿ ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಸೂಕ್ಷ್ಮಸಂಗತಿಯಾಗಿದೆ. ಆದರೆ ಇದೇ ತತ್ವದ ಮೇಲೆ ಕೆಲಸ ಮಾಡುವ ಮಿಲಿಟರಿ ಜಾಕೆಟ್ಟನ್ನು ಕೂಡ ರಕ್ಷಣಾ ಸಚಿವಾಲಯ ಪರೀಕ್ಷೆ ಮಾಡುತ್ತಿದೆಯೆಂದು ನಂಬಲಾಗಿದೆ.

ಇದು ಸಾಮಾನ್ಯವಾಗಿ ಜೇಮ್ಸ್ ಬಾಂಡ್‌ಗೆ ಸಂಬಂಧಿಸಿದ ಸಂಶೋಧನೆಯಾಗಿದೆ. ಈ ತಂತ್ರಜ್ಞಾನದ ಹಿಂದಿನ ಮೆದುಳಾದ ಪ್ರೊ. ಸರ್ ಜಾನ್ ಪೆಂಡ್ರಿ ಮುಂದಿನ ಹೆಜ್ಜೆಯು ಕ್ಯಾಮೆರಾ ಮತ್ತು ಪ್ರೊಜೆಕ್ಟರ್ ಇಲ್ಲದೇ ಟ್ಯಾಂಕ್ ಅದೃಶ್ಯ ಮಾಡುವುದು ಎಂದು ಹೇಳಿದರು.
ಮತ್ತಷ್ಟು
ಇರಾನ್ ದಾಳಿಯಿಂದ ಊಹಾತೀತ ಪರಿಣಾಮ
ಬೇನಜೀರ್ ಭುಟ್ಟೊಗೆ ಹತ್ಯೆ ಬೆದರಿಕೆ
ಎಲ್‌ಟಿಟಿಇ ಮಾಜಿ ನಾಯಕ ಕರ್ನಲ್ ಕರುಣಾ ಬಂಧನ
ಸರ್ಕಾರದ ಕಣ್ಣು ಕುರುಡು:ಭುಟ್ಟೊ ಟೀಕೆ
ಕುರ್ದಿಗಳ ದಾಳಿಗೆ ಅಮೆರಿಕ ತಕ್ಕ ಉತ್ತರ
ತುರ್ತು ಪರಿಸ್ಥಿತಿಯತ್ತ ಪಾಕಿಸ್ತಾನ