ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ತಮಿಳುಸೆಲ್ವನ್ ಸಾವಿಗೆ ಕೃತಿಯ ಮೂಲಕ ಸೇಡು
ಶ್ರೀಲಂಕಾ ದ್ವೀಪ ರಾಷ್ಟ್ರದಲ್ಲಿ ನಾಗರಿಕ ಆಂದೋಳನದ ಕರಿನೆರಳು ಭೂತಾಕಾರವಾಗಿ ಚಾಚಿದ್ದು, ತಮ್ಮ ಉನ್ನತ ನಾಯಕ ತಮಿಳ್‌ಸೆಲ್ವನ್ ಸಾವಿಗೆ ಸೇಡು ತೀರಿಸಿಕೊಳ್ಳುವುದು ಕೃತಿಯ ಮೂಲಕವೇ ಹೊರತು ಮಾತಿನಿಂದಲ್ಲ ಎಂದು ಎಲ್‌ಟಿಟಿಇ ತಿಳಿಸಿದೆ.

ತಮಿಳು ಟೈಗರ್ಸ್ ವಕ್ತಾರ ರಾಸಯ್ಯ ಇಳಾಂತಿರಿಯನ್ ಬಿಬಿಸಿ ಜತೆ ಮಾತನಾಡುತ್ತಾ, ಕೃತಿಯ ಮೂಲಕವೇ ಹೊರತು ಮಾತಿನಿಂದ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಅದರ ಬಗ್ಗೆ ಹೆಚ್ಚು ವಿವರ ನೀಡದೇ ಅನಿರೀಕ್ಷಿತವಾಗಿರುತ್ತದೆ ಎಂದಷ್ಟೇ ಹೇಳಿದರು.

ಎಲ್‌ಟಿಟಿಇ ಮುಖಂಡ ವೇಲುಪಿಳ್ಳೈ ಪ್ರಭಾಕರನ್ ತಮಿಳ್ ಸೆಲ್ವನ್ ಸಾವಿಗೆ ಸಂತಾಪ ಸೂಚಿಸಲು ಅಪರೂಪದ ದರ್ಶನ ನೀಡಿದ ಬಳಿಕ ಇಳಾಂತಿರಿಯನ್ ಮೇಲಿನ ಬೆದರಿಕೆ ಹಾಕಿದ್ದಾರೆ. ಬಂಡುಕೋರರ ಸಾರ್ವಜನಿಕ ಪ್ರತಿನಿಧಿಯಾಗಿದ್ದ ತಮಿಳ್ ಸೆಲ್ವನ್ ಶ್ರೀಲಂಕಾ ವಾಯುಪಡೆಯ ದಾಳಿಗೆ ಬಲಿಯಾಗಿದ್ದರು.

ಬಾಂಬ್ ದಾಳಿಯಲ್ಲಿ ಇನ್ನೂ ಐವರು ಹತರಾಗಿದ್ದಾರೆ. ತಮಿಳ್ ಸೆಲ್ವನ್‌ನ ಹೆಚ್ಚುವರಿ ಹುದ್ದೆಯನ್ನು ಎಲ್‌ಟಿಟಿಇ ಪೊಲೀಸ್ ಮುಖಂಡ ನಾದೇಶನ್ ನಿರ್ವಹಿಸಲಿದ್ದಾರೆ.
ಮತ್ತಷ್ಟು
ತುರ್ತು ಪರಿಸ್ಥಿತಿ ಅಸಿಂಧು: ಪಾಕ್ ಸು.ಕೋರ್ಟ್
ಪಾಕಿನಲ್ಲಿ ತುರ್ತು ಪರಿಸ್ಥಿತಿ: ಮುಷರಫ್ ಸರ್ವಾಧಿಕಾರ
ಅದೃಶ್ಯ ಟ್ಯಾಂಕ್ ಪ್ರಯೋಗ ಯಶಸ್ವಿ
ಇರಾನ್ ದಾಳಿಯಿಂದ ಊಹಾತೀತ ಪರಿಣಾಮ
ಬೇನಜೀರ್ ಭುಟ್ಟೊಗೆ ಹತ್ಯೆ ಬೆದರಿಕೆ
ಎಲ್‌ಟಿಟಿಇ ಮಾಜಿ ನಾಯಕ ಕರ್ನಲ್ ಕರುಣಾ ಬಂಧನ