ಎಲ್‌ಟಿಟಿಇ ಶಾಂತಿಸಂಧಾನಕಾರ, ರಾಜಕೀಯ ಮುಖಂಡ ಎಸ್.ಪಿ.ತಮಿಳ್ ಸೆಲ್ವಂನನ್ನು ಶ್ರೀಲಂಕಾ ಸೈನಿಕ ಪಡೆ ಅಮಾನವೀಯವಾಗಿ ಹತ್ಯೆಗೈದಿದೆ ಎಂದು ಆಪಾದಿಸಿರುವ ಎಲ್‌ಟಿಟಿಇ, ಲಂಕಾ ಸರಕಾರದ ವಿರುದ್ಧದ ಹೋರಾಟ ಮುಂದುವರೆಲಿರುವುದಾಗಿ ಬಂಡುಕೋರ ಸಂಘಟನೆಯ ವರಿಷ್ಠ ವಿ.ಪ್ರಭಾಕರನ್ ಘೋಷಿಸಿದ್ದಾರೆ. ಶುಕ್ರವಾರದಂದು ಶ್ರೀಲಂಕಾ ಸೈನಿಕ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಎಲ್‌ಟಿಟಿಇಯ ರಾಜಕೀಯ ಮುಖಂಡ ತಮಿಳ್ ಸೆಲ್ವಂ ಸಾವಿಗೀಡಾಗಿದ್ದರು.
ಆದರೆ ತಮಿಳ್ ಪ್ರತ್ಯೇಕತವಾದದ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದಿರುವ ಎಲ್‌ಟಿಟಿಇ ವರಿಷ್ಠ ಪ್ರಭಾಕರನ್,ನಮ್ಮ ಹಕ್ಕಿಗಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ಬುದ್ಧನ ಸಾರ್ವತ್ರಿಕ ಶಾಂತಿಯ ಸಂದೇಶವನ್ನು ಗಮನಿಸುವುದಿಲ್ಲ,ಯಾಕೆಂದರೆ ಸಿಂಹಳ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿಲ್ಲ.ಅದು ಯುದ್ಧ ದಾಹಿಯಾಗಿದ್ದು ನಮ್ಮ ಶಾಂತಿ ಸಂಧಾನಕಾರನನ್ನು ಅಮಾನವೀಯವಾಗಿ ಕೊಂದಿರುವುದೇ ಸಾಕ್ಷಿ ಎಂದು ಪ್ರಭಾಕರನ್ ಶ್ರೀಲಂಕಾ ಸರಕಾರದ ವಿರುದ್ಧ ಕೆಂಡಕಾರಿದ್ದಾರೆ.
ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿರುವ ತಮಿಳ್ ಸೆಲ್ವಂ ನನಗೆ ಆತ್ಮೀಯನಾಗಿದ್ದ,ನಾನು ಆತನನ್ನು ತುಂಬಾ ಗೌರವಿಸುತ್ತಿದ್ದೆ.ಆತನ ಸಾಮರ್ಥ್ಯ ಹಾಗೂ ಮುಖಂಡತ್ವದ ಗುಣಗಳು ಶ್ಲಾಘನೀಯ ಎಂದು ಅವರು ಹೇಳಿದರು.
|