ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸೇನೆ ಹುದ್ದೆ ತ್ಯಜಿಸಲು ಮುಷರ್ರಫ್‌ಗೆ ಒತ್ತಾಯ
ಮುಷರ್ರಫ್ ಅವರು ಪಾಕ್‌ನಲ್ಲಿ ತುರ್ತುಪರಿಸ್ಥಿತಿ ಹೇರಿದ ಬಳಿಕ ಅಂತಾರಾಷ್ಟ್ರೀಯ ಒತ್ತಡಗಳು ತೀವ್ರವಾಗಿ ಬರುತ್ತಿವೆ. ಮುಷರ್ರಫ್ ಸೇನೆಯ ಜತೆ ಸಂಬಂಧ ಕಡಿದುಕೊಂಡು ನಾಗರಿಕ ಆಡಳಿತ ಮರುಸ್ಥಾಪಿಸುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಂಡೋಲೀಜಾ ರೈಸ್ ಆಗ್ರಹಿಸಿದ್ದಾರೆ.

ಮುಷರ್ರಫ್ ಸಾಂವಿಧಾನಿಕ ಮಾರ್ಗಕ್ಕೆ ಬೇಗ ಹಿಂತಿರುಗಿದಷ್ಟೂ ಪ್ರತಿಯೊಬ್ಬರಿಗೂ ಒಳ್ಳೆಯದು ಎಂದು ರೈಸ್ ಹೇಳಿದರು. ಪಾಕಿಸ್ತಾನಕ್ಕೆ ನೆರವಿನ ಪರಾಮರ್ಶೆ ಮಾಡುವುದಾಗಿ ರೈಸ್ ಭಾನುವಾರ ತಿಳಿಸಿದ್ದರು.

ಆದರೆ ತಮ್ಮ ಮಧ್ಯಪೂರ್ವ ಪ್ರವಾಸದ ಮೇಲೆ ಚಾಚಿರುವ ಪಾಕಿಸ್ತಾನ ಬಿಕ್ಕಟ್ಟಿನ ಕರಿನೆರಳಿನ ಬಗ್ಗೆ ಮಾತನಾಡುತ್ತಾ, ಅಮೆರಿಕವು ಸಂಪೂರ್ಣವಾಗಿ ನೆರವನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದರು. 2001ರಿಂದೀಚೆಗೆ ಅಮೆರಿಕವು 11 ಶತಕೋಟಿ ಡಾಲರ್ ಆರ್ಥಿಕ ನೆರವು ಪಾಕಿಸ್ತಾನಕ್ಕೆ ನೀಡಿದೆ.
ಮತ್ತಷ್ಟು
ಉಗ್ರರ ಕೈಗೆ ಅಣು ಬಾಂಬ್:ಅಮೆರಿಕ ಭಯ
ಎಲ್‌ಟಿಟಿಇ ಹೋರಾಟ ನಿರಂತರ:ಪ್ರಭಾಕರನ್
ಸ್ವಾತ್ ಕಣಿವೆ ತಾಲಿಬಾನ್ ಉಗ್ರರ ವಶ
ತಮಿಳುಸೆಲ್ವನ್ ಸಾವಿಗೆ ಕೃತಿಯ ಮೂಲಕ ಸೇಡು
ತುರ್ತು ಪರಿಸ್ಥಿತಿ ಅಸಿಂಧು: ಪಾಕ್ ಸು.ಕೋರ್ಟ್
ಪಾಕಿನಲ್ಲಿ ತುರ್ತು ಪರಿಸ್ಥಿತಿ: ಮುಷರಫ್ ಸರ್ವಾಧಿಕಾರ