ಪಾಕಿಸ್ತಾನದ ಅಸಹಜ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಅಮೆರಿಕವು ಅದರ ಜತೆ ವಾರ್ಷಿಕ ರಕ್ಷಣಾ ಮಾತುಕತೆಯನ್ನು ಸ್ಥಗಿತಗೊಳಿಸಿದೆ ಎಂದು ಪೆಂಟಗಾನ್ ವಕ್ತಾರ ಸೋಮವಾರ ಇಲ್ಲಿ ತಿಳಿಸಿದರು.
ರಕ್ಷಣಾ ನೀತಿ ಕುರಿತ ಅಧೀನ ಕಾರ್ಯದರ್ಶಿ ಎರಿಕ್ ಎಡೆಲ್‌ಮೆನ್ ಮಂಗಳವಾರ ಆರಂಭವಾಗಬೇಕಿದ್ದ 2 ದಿನಗಳ ಮಾತುಕತೆಯ ಅಮೆರಿಕ ನಿಯೋಗದ ನೇತೃತ್ವ ವಹಿಸಬೇಕಿತ್ತು.
ಆದರೆ ಅಲ್ಲಿ ರಾಜಕೀಯ ಪರಿಸ್ಥಿತಿ ಸುಧಾರಣೆ ಆಗುವವರೆಗೆ ಅವರು ಹೋಗುವುದಿಲ್ಲ ಎಂದು ಪೆಂಟಗಾನ್ ವಕ್ತಾರ ಜೆಫ್ ಮೊರೆಲ್ ಹೇಳಿದರು. ಎಲ್ಲ ಪಾಲುದಾರರು ಪೂರ್ಣ ಗಮನವಹಿಸಬೇಕಾದ ವಾತಾವರಣ ದ್ವಿಪಕ್ಷೀಯ ಮಾತುಕತೆಯಲ್ಲಿ ಇರಬೇಕಾಗುತ್ತದೆ ಎಂದು ಅವರು ನುಡಿದರು.
ಪ್ರಮುಖ ಉದ್ದೇಶಗಳ ಈಡೇರಿಕೆಗೆ ಪರಿಸ್ಥಿತಿ ಅನುಕೂಲಕರವಾದ ಬಳಿಕ ನಾವು ಸಭೆ ಪುನರ್ನಿಗದಿ ಮಾಡುತ್ತೇವೆ ಎಂದು ಅವರು ನುಡಿದರು.ಮೊರೆಲ್ ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಜತೆ ಪ್ರಯಾಣ ಮಾಡಲು ನಿಗದಿಯಾಗಿತ್ತು, ಪಾಕಿಸ್ತಾನವನ್ನು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಪುನಃ ಮರಳಿಸುವಂತೆ ಗೇಟ್ಸ್ ಒತ್ತಾಯಿಸಿದ್ದಾರೆ.
|