ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸಂವಿಧಾನ ಮರುಸ್ಥಾಪನೆಗೆ ಹೋರಾಟ:;ಚೌಧರಿ
ರಾಷ್ಟ್ರದಲ್ಲಿ ಸಂವಿಧಾನ ಮರುಸ್ಥಾಪನೆ ಮತ್ತು ಕಾನೂನಿನ ಆಡಳಿತಕ್ಕೆ ಹೊಸ ಹೋರಾಟ ಆರಂಭಿಸುವುದಾಗಿ ವಜಾಗೊಂಡ ಪಾಕಿಸ್ತಾನದ ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಚೌಧರಿ ಪಣತೊಟ್ಟಿದ್ದಾರೆ.

ಎರಡು ದಿನಗಳ ಕೆಳಗೆ ಗೃಹಬಂಧನದಲ್ಲಿ ಇರಿಸಿದ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಅವರು, ಭಯೋತ್ಪಾದನೆ ಬಗ್ಗೆ ತಾವು ಮೃದುಧೋರಣೆ ತಾಳಿದ್ದೇನೆಂಬ ಮುಷರ್ರಫ್ ಆರೋಪಗಳನ್ನು ನಿರಾಕರಿಸಿ ಯಾವುದೇ ತಪ್ಪು ಮಾಡಿಲ್ಲವೆಂದು ಪ್ರತಿಪಾದಿಸಿದರು.

ಪಾಕ್‌ನಲ್ಲಿ ನಡೆದಿದ್ದೆಲ್ಲವೂ ಅಕ್ರಮ, ಅಸಂವಿಧಾನಿಕ ಮತ್ತು ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧ ಎಂದು 59 ವರ್ಷ ವಯಸ್ಸಿನ ಚೌಧರಿ ಭಾನುವಾರ ರಾತ್ರಿ ನ್ಯೂಸ್ ಸುದ್ದಿಪತ್ರಿಕೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಚೌಧರಿ ಅವರನ್ನು ಕಳೆದ ಮಾರ್ಚ್‌ನಲ್ಲಿ ಅಮಾನತು ಮಾಡಿದ್ದರಿಂದ ಮುಷರ್ರಫ್ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ವ್ಯಕ್ತವಾಗಿತ್ತು, ಸ್ವತಂತ್ರ ನ್ಯಾಯಾಂಗ, ಕಾನೂನಿನ ಆಡಳಿತ ಮತ್ತು ಸಂವಿಧಾನ ರಕ್ಷಣೆಗೆ ತಾವು ಇನ್ನೊಂದು ಹಂತದ ಹೋರಾಟಕ್ಕೆ ಸಂಕಲ್ಪಿಸಿರುವುದಾಗಿ ಅವರು ನುಡಿದರು.
ಮತ್ತಷ್ಟು
ಪಾಕ್ ಜತೆ ರಕ್ಷಣಾ ಮಾತುಕತೆ ಸ್ಥಗಿತ
ಸೇನೆ ಹುದ್ದೆ ತ್ಯಜಿಸಲು ಮುಷರ್ರಫ್‌ಗೆ ಒತ್ತಾಯ
ಉಗ್ರರ ಕೈಗೆ ಅಣು ಬಾಂಬ್:ಅಮೆರಿಕ ಭಯ
ಎಲ್‌ಟಿಟಿಇ ಹೋರಾಟ ನಿರಂತರ:ಪ್ರಭಾಕರನ್
ಸ್ವಾತ್ ಕಣಿವೆ ತಾಲಿಬಾನ್ ಉಗ್ರರ ವಶ
ತಮಿಳುಸೆಲ್ವನ್ ಸಾವಿಗೆ ಕೃತಿಯ ಮೂಲಕ ಸೇಡು