ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ನಿಗದಿತ ಅವಧಿಯಲ್ಲಿ ಚುನಾವಣೆ: ಅಜೀಜ್
ಪಾಕಿಸ್ತಾನದ ತುರ್ತು ಪರಿಸ್ಥಿತಿಯ ಕುರಿತು ಅಂತಾರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಒತ್ತಡಗಳು ಬರಲಾರಂಭಿಸಿದ ಹಿನ್ನೆಲೆಯಲ್ಲಿ, ಪಾಕ್ ಪ್ರಧಾನಿ ಶೌಕತ್ ಅಜೀಜ್, ಪಾಕ್ ಸಂಸತ್ ಚುನಾವಣೆ ಕುರಿತು ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದು, ನಿಗದಿತ ಅವಧಿಗೆ ಚುನಾವಣೆಗಳು ನಡೆಯಲಿವೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು , ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಚುನಾವಣೆಗಳು ಒಂದು ವರ್ಷಗಳ ಕಾಲ ವಿಳಂಬವಾಗಲಿವೆ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ಅಜೀಜ್, ಸೋಮವಾರ ತಮ್ಮ ರಾಗ ಬದಲಾಯಿಸಿ ನಿಗದಿತ ಅವಧಿಗೆ ಚುನಾವಣೆ ನಡೆಯಲಿವೆ ಎಂದು ಹೇಳುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದೆದುರು ತಮ್ಮ ನಿಷ್ಠೆಯನ್ನು ಮೆರೆದಿದ್ದಾರೆ.

ಇದೇ ನವೆಂಬರ್ 15ರಂದು ಪಾಕ್ ಸಂಸತ್ತಿನ ಅವಧಿ ಪೂರ್ಣಗೊಳ್ಳಲಿದ್ದು, ಈ ಅವಧಿಯಿಂದ 60 ದಿನಗಳೊಳಗಾಗಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳು ಏರ್ಪಡಿಸಬೇಕಾದ ಅನಿವಾರ್ಯತೆ ಪಾಕ್ ಸರಕಾರದ ಮುಂದಿದೆ.

ಪಾಕಿಸ್ತಾನದ ಚುನಾವಣೆಗಳು 2008ರ ಜನವರಿ 8ರಂದು ಏರ್ಪಡುವ ದಟ್ಟ ಸಾಧ್ಯತೆಗಳಿವೆ ಎಂದು ಖಚಿತ ಮೂಲಗಳನ್ನಾಧರಿಸಿ ಪ್ರಮುಖ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಆದರೆ, ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರು ಚುನಾವಣೆ ದಿನಾಂಕದ ಬಗ್ಗೆ ಪ್ರಶ್ನಿಸಿದಾಗ, ಖಚಿತವಾದ ದಿನಾಂಕ ಹೇಳುವ ಕುರಿತು ಪ್ರಧಾನಿ ಶೌಕತ್ ಅಜೀಜ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಮತ್ತಷ್ಟು
ಸಂವಿಧಾನ ಮರುಸ್ಥಾಪನೆಗೆ ಹೋರಾಟ:;ಚೌಧರಿ
ಪಾಕ್ ಜತೆ ರಕ್ಷಣಾ ಮಾತುಕತೆ ಸ್ಥಗಿತ
ಸೇನೆ ಹುದ್ದೆ ತ್ಯಜಿಸಲು ಮುಷರ್ರಫ್‌ಗೆ ಒತ್ತಾಯ
ಉಗ್ರರ ಕೈಗೆ ಅಣು ಬಾಂಬ್:ಅಮೆರಿಕ ಭಯ
ಎಲ್‌ಟಿಟಿಇ ಹೋರಾಟ ನಿರಂತರ:ಪ್ರಭಾಕರನ್
ಸ್ವಾತ್ ಕಣಿವೆ ತಾಲಿಬಾನ್ ಉಗ್ರರ ವಶ