ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯು ಉಗ್ರಗಾಮಿ ಶಕ್ತಿಗಳನ್ನು ಮಟ್ಟ ಹಾಕುವ ನಿರ್ಣಾಯಕ ಕೆಲಸದಿಂದ ಮುಷರ್ರಫ್ ಆಡಳಿತದ ಗಮನವನ್ನು ಬೇರೆಡೆ ಸೆಳೆಯಬಹುದು ಎಂದು ಹೆಸರಾಂತ ದಕ್ಷಿಣ ಏಷ್ಯಾ ತಜ್ಞೆ ತೆರೆಸಿಟ ಸ್ಕಾಫರ್ ಭಾವಿಸಿದ್ದಾರೆ. . ತುರ್ತುಪರಿಸ್ಥಿತಿ ಘೋಷಣೆಯ ಪಾಠದಲ್ಲಿ ಮೊದಲ ಎರಡು ಪಂಕ್ತಿಗಳು ಹಿಂಸಾತ್ಮಕ ಉಗ್ರವಾದನ್ನು ಉಲ್ಲೇಖಿಸಿದೆ. ಅದು ಪಾಕಿಸ್ತಾನಕ್ಕೆ ಅಪಾಯಕಾರಿಯಾಗಿದೆ ಎನ್ನುವುದನ್ನು ತಾವು ಒಪ್ಪುವುದಾಗಿ ಅವರು ಹೇಳಿದರು. ಸ್ಕಾಫರ್ ವಾಷಿಂಗ್ಟನ್ ಮೂಲದ ವ್ಯೂಹಾತ್ಮಕ ಮತ್ತು ಅಂತಾರಾಷ್ಟ್ರೀಯ ಅಧ್ಯಯನಗಳ ಕೇಂದ್ರವಾದ ದಕ್ಷಿಣ ಏಷ್ಯ ಕಾರ್ಯಕ್ರಮದ ನಿರ್ದೇಶಕಿಯಾಗಿದ್ದಾರೆ.
ಮುಂದಿನ 8 ಅಥವಾ 9 ಪಂಕ್ತಿಗಳು ಸರ್ಕಾರದಲ್ಲಿ ಹಸ್ತಕ್ಷೇಪ ನಡೆಸುವುದೆಂದು ಮುಷರ್ರಫ್ ನಂಬಿರುವ ನ್ಯಾಯಾಂಗದ ತೀರ್ಪುಗಳು. ಆದರೆ ನನಗೆ ಮತ್ತು ಅನೇಕ ಅಮೆರಿಕನ್ನರಿಗೆ ನ್ಯಾಯಾಂಗ ಸ್ವಾತಂತ್ರ್ಯದಲ್ಲಿ ಅದು ಕಾನೂನುಬದ್ಧ ಚಟುವಟಿಕೆಯಾಗಿ ಕಾಣುತ್ತಿದೆ ಎಂದು ಅವರು ಹೇಳಿದರು.ಈ ಪರ್ಯಾಯ ಅಧಿಕಾರ ಕೇಂದ್ರವನ್ನು ತೆಗೆಯುವುದು ಮುಷರ್ರಫ್ ಯೋಜನೆ ಎನ್ನುವುದು ಸ್ಪಷ್ಟವಾಗಿದೆಯೆಂದು ಅವರು ನುಡಿದರು.
ಮುಷರ್ರಫ್ ಅವರ ಕ್ರಮಗಳನ್ನು ಪ್ರಶ್ನಿಸುತ್ತಾ, ಪ್ರತಿಭಟನೆಗಳನ್ನು ಹತ್ತಿಕ್ಕಿ ಪರ್ಯಾಯ ಅಧಿಕಾರ ಕೇಂದ್ರ ಅಥವಾ ಪರ್ಯಾಯ ಮಾಹಿತಿ ಹೊಮ್ಮುವ ಸಾಧ್ಯತೆಯನ್ನು ನಿವಾರಿಸುವುದರಲ್ಲಿ ಸರ್ಕಾರ ಮುಳುಗಿದೆ ಎಂದು ಅವರು ಟೀಕಿಸಿದರು.
ಸೇನಾ ನೆಲೆಗಳ ಮೇಲೆ ದಾಳಿ ಮತ್ತು ಆತ್ಮಹತ್ಯೆ ಬಾಂಬ್ ದಾಳಿ ನಡೆಸುವ ಮೂಲಕ ಕಾನೂನು ಮುರಿಯುವ ಉಗ್ರಗಾಮಿಗಳ ವಿರುದ್ಧ ಅಧಿಕಾರ ಚಲಾಯಿಸುವ ಕೆಲಸಕ್ಕೆ ಸರ್ಕಾರ ಕಡಿಮೆ ಆದ್ಯತೆ ನೀಡಲಿರುವುದು ನಿಜವಾದ ಅಪಾಯವಾಗಿದೆ ಎಂದು ಅವರ ಹೇಳಿಕೆಯನ್ನು ಉಲ್ಲೇಖಿಸಿ ಡೇಲಿ ಟೈಮ್ಸ್ ವರದಿ ಮಾಡಿದೆ.
ಮುಷರ್ರಫ್ ಮತ್ತು ಸೇನೆ ಪ್ರಕ್ಷುಬ್ಧ ಪೀಡಿತ ಸ್ವಾಟ್ ಪ್ರದೇಶದಲ್ಲಿ ಏನೇ ಮಾಡಲಿ ಬೇರಾವುದೇ ರಾಜಕೀಯ ಶಕ್ತಿಗಳ ಬೆಂಬಲವಿಲ್ಲದೇ ಮಾಡುತ್ತದೆನ್ನುವುದನ್ನು ತುರ್ತುಪರಿಸ್ಥಿತಿ ಖಾತರಿಪಡಿಸುತ್ತದೆ ಎಂದು ಅವರು ನುಡಿದರು.
ಇದಕ್ಕೆ ಮುನ್ನ, ತುರ್ತುಪರಿಸ್ಥಿತಿ ಘೋಷಣೆಯಿಂದ ಬುಷ್ ಆಡಳಿತ ದೊಡ್ಡ ಮುಜುಗರದ ಸ್ಥಿತಿ ಎದುರಿಸುವಂತಾಗಿದೆ ಎಂದು ಹೇಳಿದ ಅವರು ಮುಷರ್ರಫ್ ಇನ್ನು 6 ತಿಂಗಳು ಅಧಿಕಾರದಲ್ಲಿ ಉಳಿದರೆ ಆಶ್ಚರ್ಯ ಎಂದು ನುಡಿದರು.
|