ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಮುಷರ್ರಫ್‌ಗೆ ಸಮವಸ್ತ್ರ ತ್ಯಜಿಸಲು ಬುಷ್ ಸಲಹೆ
PTI
ಪಾಕಿಸ್ತಾನದಲ್ಲಿ ಆದಷ್ಟು ಬೇಗ ಚುನಾವಣೆಯನ್ನು ನಡೆಸಿ ಸಮವಸ್ತ್ರವನ್ನು ತ್ಯಜಿಸುವಂತೆ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರಿಗೆ ಸೂಚಿಸಿದ್ದಾರೆ.

ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾದ ಬಳಿಕ ಮೊದಲ ಬಾರಿ ಸಾರ್ವಜನಿಕ ಪ್ರತಿಕ್ರಿಯೆ ನೀಡಿರುವ ಬುಷ್, ಮುಷರ್ರಫ್ ಶೀಘ್ರದಲ್ಲೇ ಪ್ರಜಾಪ್ರಭುತ್ವ ಮರುಸ್ಥಾಪಿಸುತ್ತಾರೆಂದು ಆಶಾವಾದ ವ್ಯಕ್ತಪಡಿಸಿದರು. ಆದರೆ ಅಮೆರಿಕದ ಸಲಹೆಯನ್ನು ನಿರಾಕರಿಸಿದರೆ ಅಮೆರಿಕ ನೆರವು ನೀಡುವ ಬಗೆ ಹೇಗೆ ಎಂದು ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.

ನಾನು ಕಾರ್ಯದರ್ಶಿ ರೈಸ್ ಅವರನ್ನು ಕರೆದು ಶೀಘ್ರವೇ ಚುನಾವಣೆ ನಡೆಸುವುದನ್ನು ನಿರೀಕ್ಷಿಸುವುದಾಗಿ ಮತ್ತು ಅಧ್ಯಕ್ಷರು ಸಮವಸ್ತ್ರ ತ್ಯಜಿಸುವಂತೆ ತಿಳಿಸಲು ಹೇಳಿದ್ದಾಗಿ ಟರ್ಕಿಯ ಪ್ರಧಾನಮಂತ್ರಿ ಜತೆ ಭೇಟಿಯ ಬಳಿಕ ಅವರು ಶ್ವೇತಭವನದಲ್ಲಿ ತಿಳಿಸಿದರು. ಆದಾಗ್ಯೂ, ಬುಷ್ ಅವರು ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಮುಷರ್ರಫ್ ಪಾತ್ರವನ್ನು ಶ್ಲಾಘಿಸಿದರು.ಇದಕ್ಕೆ ಸಂಬಂಧಿಸಿದಂತೆ ಅವರ ಜತೆ ಕೆಲಸ ಮಾಡಲು ಅಮೆರಿಕ ಬಯಸುತ್ತದೆ ಎಂದು ಅವರು ನುಡಿದರು.

ಅಧ್ಯಕ್ಷ ಮುಷರ್ರಫ್ ಉಗ್ರವಾದಿಗಳು ಮತ್ತು ಮೂಲಭೂತವಾದಿಗಳ ವಿರುದ್ಧ ತೀವ್ರ ಹೋರಾಟಗಾರ. ಅವುಗಳಿಂದ ಉಂಟಾಗುವ ಅಪಾಯದ ಬಗ್ಗೆ ಅವರಿಗೆ ಅರಿವಿದೆ ಎಂದು ಬುಷ್ ಹೇಳಿದರು.

ಈ ಭಯೋತ್ಪಾದಕರ ವಿರುದ್ಧ ಹೋರಾಡುವ ಸಲುವಾಗಿ ಅವರ ಜತೆ ಕೆಲಸ ಮಾಡಲು ನಾನು ಬಯಸುತ್ತೇನೆ. ಉಗ್ರಗಾಮಿಗಳು ಮುಷರ್ರಫ್ ಅವರ ಹತ್ಯೆಗೆ ಯತ್ನಿಸಿದ್ದಲ್ಲದೇ ಆಫ್ಘಾನಿಸ್ತಾನದ ಮೇಲೆ ದಾಳಿ ನಡೆಸಲು ಪಾಕ್‌ನ ಜಾಗವನ್ನು ಬಳಸಿಕೊಂಡರು ಎಂದು ಬುಷ್ ಹೇಳಿದರು.
ಮತ್ತಷ್ಟು
ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಚ್ಯುತಿ
ನಿಗದಿತ ಅವಧಿಯಲ್ಲಿ ಚುನಾವಣೆ: ಅಜೀಜ್
ಸಂವಿಧಾನ ಮರುಸ್ಥಾಪನೆಗೆ ಹೋರಾಟ:;ಚೌಧರಿ
ಪಾಕ್ ಜತೆ ರಕ್ಷಣಾ ಮಾತುಕತೆ ಸ್ಥಗಿತ
ಸೇನೆ ಹುದ್ದೆ ತ್ಯಜಿಸಲು ಮುಷರ್ರಫ್‌ಗೆ ಒತ್ತಾಯ
ಉಗ್ರರ ಕೈಗೆ ಅಣು ಬಾಂಬ್:ಅಮೆರಿಕ ಭಯ