ಪಾಕಿಸ್ತಾನ ವಾಯುವ್ಯ ಮುಂಚೂಣಿ ಪ್ರಾಂತ್ಯದಲ್ಲಿ ಸ್ವಾಟ್ ಜಿಲ್ಲೆಯ ಜಿಹಾನ್ ಅಬಾದ್ ಪ್ರದೇಶದಲ್ಲಿದ್ದ ಬುದ್ಧನ ಐತಿಹಾಸಿಕ ಪ್ರತಿಮೆಯನ್ನು ಕೆಲವು ಅಜ್ಞಾತ ಉಗ್ರಗಾಮಿಗಳು ಒಡೆದುಹಾಕಿದ್ದಾರೆ. ಐತಿಹಾಸಿಕ ಸ್ಮಾರಕದ ವಿನಾಶವು ಶನಿವಾರ ರಾತ್ರಿ ಸಂಭವಿಸಿದೆ ಎಂದು ಸ್ವಾಟ್ ವಸ್ತುಸಂಗ್ರಹಾಲಯದ ಉಪ ಕ್ಯುರೇಟರ್ ತಿಳಿಸಿದ್ದಾರೆ.
ಬುದ್ಧನ 7ನೇ ಶತಮಾನದ ಪ್ರತಿಮೆಯ ಮೇಲೆ ಇದು ಎರಡನೇ ಬಾರಿ ನಡೆಸಿದ ದಾಳಿಯಾಗಿದೆ. ಹೊಸ ದಾಳಿಯಿಂದ ಬುದ್ಧನ ತಲೆಗೆ ತೀವ್ರ ಹಾನಿಯಾಗಿದ್ದು ಅದರ ಭುಜಗಳು ಕೂಡ ವಿಕೃತಿಗೊಂಡಿದೆ.
ಈ ಪ್ರತಿಮೆಯು ಬೌದ್ಧ ಗಂಧಹಾರ ಕಲೆಯ ಸ್ಫೂರ್ತಿಯ ಸಂಕೇತವಾಗಿತ್ತು.. ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದ ಬಾಮಿಯಾನ್ ಐತಿಹಾಸಿಕ ಪ್ರತಿಮೆಗಳನ್ನು ನೆಲಸಮ ಮಾಡಿದ ಬಳಿಕ ಬುದ್ಧನ ಸಾಂಸ್ಕೃತಿಕ ಪರಂಪರೆಗೆ ಏಕೈಕ ನಿದರ್ಶನವಾಗಿ ಸ್ವಾಟ್ ಪ್ರತಿಮೆ ನಿಂತಿತ್ತು.
ಈ ಪ್ರತಿಮೆಯು ಸುಮಾರು 7 ಮೀಟರ್ ಎತ್ತರವಾಗಿದೆ ಮತ್ತು ಭೂಮಿಯಿಂದ 20 ಅಡಿ ಮೇಲ್ಬಾಗದಲ್ಲಿ ಬುದ್ಧನು ಧ್ಯಾನ ಮಾಡುತ್ತಿರುವ ದೃಶ್ಯ ಮೋಹಕವಾಗಿತ್ತು ಎಂದು ಅಕ್ಲೀಮ್ ಹೇಳಿದರು.
|