ಮೊಹಾಲಿಯಲ್ಲಿ ಬುಧವಾರ ನಡೆಯುವ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಣೆಗಾಗಿ ಬಯಸಿದ್ದ ಪಾಕಿಸ್ತಾನ ರೈಲ್ವೇ ಸಚಿವ ಶೇಖ್ ರಶೀದ್ ಅಹಮದ್ ಅವರಿಗೆ ವೀಸಾ ನಿರಾಕರಿಸಿದ ಭಾರತದ ನಿರ್ಧಾರಕ್ಕೆ ಪಾಕಿಸ್ತಾನ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.
ಭಾರತೀಯ ಹೈಕಮಿಷನರ್‌ರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿಕೊಂಡು, ವೀಸಾ ನಿರಾಕರಣೆ ಕುರಿತು ಪ್ರಬಲವಾಗಿ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಮಹಮದ್ ಸಾದಿಕ್ ತಿಳಿಸಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧ ಬಲ ವರ್ಧನೆಯ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರಯತ್ನಗಳಿಗೆ ಈ ವೀಸಾ ನಿರಾಕರಣೆ ಕಾರ್ಯವು ಖಂಡಿತವಾಗಿಯೂ ಪೂರಕವಲ್ಲ ಎಂದು ಅವರು ಹೇಳಿದರು.
ಸಚಿವರು ತಮ್ಮ ತಂಡಕ್ಕೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ನಿಟ್ಟಿನಲ್ಲಿ ಮೊಹಾಲಿಗೆ ಆಗಮಿಸಲಿದ್ದರು.
|