ಜಗತ್ತಿನಲ್ಲೇ ಅತ್ಯಂತ ಎತ್ತರದ ಬುದ್ಧ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಚೀನಾದ ಲೀಶಾನ್ ಬುದ್ಧ ವಿಗ್ರಹಕ್ಕೆ ಆದ ಹಾನಿ ಸರಿಪಡಿಸುವ ಕಾರ್ಯ ಶೀಘ್ರವೇ ಆರಂಭವಾಗಲಿದೆ.
ವಿಶ್ವ ಪರಂಪರೆ ಪಟ್ಟಿಗೆ ವಿಶ್ವಸಂಸ್ಥೆ ಗುರುತಿಸಿರುವ 71 ಮೀಟರ್ ಎತ್ತರದ ಈ ಬೃಹತ್ ವಿಗ್ರಹ, ಆಸಿಡ್ ಮಳೆಯಿಂದ ಶಿರಭಾಗದಲ್ಲಿ ಸ್ಪಲ್ಪ ಹಾನಿಗೊಳಗಾಗಿತ್ತು.
1,280 ವರ್ಷಗಳಷ್ಟು ಹಳೆಯದಾಗಿರುವ ಈ ವಿಗ್ರಹ, ದಕ್ಷಿಣ ಚೀನಾದ ಸಿಯಾಚೀನ್ ಪ್ರಾಂತ್ಯದಲ್ಲಿ 71 ಮೀಟರ್ ಎತ್ತರದ 28 ಮೀಟರ್ ಅಗಲದ ಈ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಕಳೆದ ಸಾವಿರಾರು ವರ್ಷಗಳಿಂದ ಮಳೆ ಗಾಳಿಗೆ ತುತ್ತಾಗಿರುವ ವಿಗ್ರಹದ ಶಿರಭಾಗದಲ್ಲಿ ಸ್ಪಲ್ಪ ಹಾನಿಗೊಳಗಾಗಿದೆ. ಜೊತೆಗೆ ವಿಗ್ರಹದ ನೈಸರ್ಗಿಕ ಬಣ್ಣ ಕಳೆಗುಂದಿದೆ.
"ಬುದ್ಧನ ಐತಿಹಾಸಿಕ ವಿಗ್ರಹವನ್ನು ನಾವು ತುಂಬಾ ಜಾಗರೂಕತೆಯಿಂದ ದುರಸ್ತಿ ಮಾಡಲಿದ್ದೇವೆ. ಅಲ್ಲದೆ, ಈ ದುರಸ್ತಿ ಕಾರ್ಯಕ್ಕಾಗಿ ಸಂಶೋಧನೆ ಕೈಗೊಳ್ಳಲಾಗಿದ್ದು, ವಿಗ್ರಹದ ಸಹಜತೆಗೆ ಯಾವುದೇ ಧಕ್ಕೆ ಬರದಂತೆ ದುರಸ್ತಿ ನಡೆಯಲಿದೆ ಎಂದು ಲೀಶಾನ್ ಸಾಂಸ್ಕೃತಿಕ ಸಂರಕ್ಷಣೆ ಹಾಗೂ ನಿರ್ವಹಣೆ ಸಂಸ್ಥೆಯ ನಿರ್ದೇಶಕ ಪೆಂಗ್ ಕುಯಿ ತಿಳಿಸಿದ್ದಾರೆ.
ಈ ಐತಿಹಾಸಿಕ ಬುದ್ಧನ ಪ್ರತಿಮೆಯನ್ನು ಕ್ರಿಸ್ತಶಕ 713 ರಲ್ಲಿ ತಾಂಗ್ ಆಳ್ವಿಕೆಯ ಕಾಲದಲ್ಲಿ ಕೆತ್ತಲಾಗಿದ್ದು, ಜಗತ್ತಿನಲ್ಲಿಯೇ ಅತಿ ಎತ್ತರದ ಬುದ್ಧನ ವಿಗ್ರಹವಾಗಿದೆ. 2001 ರಲ್ಲಿ ವಿಗ್ರಹದ ಹೊರಮೈ ನವೀಕರಣಕ್ಕಾಗಿ 250 ಮಿಲಿಯನ್ ಯೆನ್‌ಗಳನ್ನು ಚೀನಾ ಸರಕಾರ ಬಿಡುಗಡೆಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹದು.
|