ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಬಂಧನ ಭೀತಿ: ತಲೆಮರೆಸಿಕೊಂಡಿರುವ ಇಮ್ರಾನ್
PTI
ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ತಮ್ಮ ಮಾಜಿ ಪತಿ ಗೃಹ ಬಂಧನವಾಗುವುದರಿಂದ ತಪ್ಪಿಸಿಕೊಂಡಿದ್ದು, ತಲೆ ಮರೆಸಿಕೊಂಡಿದ್ದಾರೆ ಎಂಬುದನ್ನು ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ಜೆಮಿಮಾ ಖಾನ್ ದೃಢಪಡಿಸಿದ್ದಾರೆ.

ಪೊಲೀಸರು ಲಾಹೋರಿನಲ್ಲಿರುವ ತಮ್ಮ ಮನೆಗೆ ದಾಳಿ ಮಾಡಿ, ಕುಟುಂಬ ಸದಸ್ಯರನ್ನು ಥಳಿಸಿದಾಗ, ತಾನು ಪೊಲೀಸರಿಗೆ ಕೈಕೊಟ್ಟು ಪರಾರಿಯಾಗುವಲ್ಲಿ ಯಶಸ್ವಿಯಾಗಿರುವುದಾಗಿ ಇಮ್ರಾನ್ ಅವರಿಂದ ಬಂದ ಇ-ಮೇಲ್ ಪ್ರತಿಯನ್ನು ಜೆಮಿಮಾ ಬಿಡುಗಡೆಗೊಳಿಸಿದ್ದಾರೆ.

"ಅವರು ವಕೀಲರು, ಮಾನವಹಕ್ಕು ಸಂಘಟನೆಗಳು, ರಾಜಕೀಯ ಕಾರ್ಯಕರ್ತರ ವಿರುದ್ಧ ಬಲ ಪ್ರಯೋಗ ಮಾಡುತ್ತಿದ್ದಾರೆ ಮತ್ತು ಎಲ್ಲಾ ಪ್ರಮುಖ ಪ್ರತಿಪಕ್ಷ ನಾಯಕರು ಜೈಲು ಸೇರಿದ್ದಾರೆ" ಎಂದು ಇಮೇಲ್‌ನಲ್ಲಿ ತಿಳಿಸಿರುವ ಇಮ್ರಾನ್, ಪೊಲೀಸರು ನನ್ನ ಮನೆಗೆ ದಾಳಿ ಮಾಡಿ ದಾಂಧಲೆ ಎಬ್ಬಿಸಿದ್ದಾರೆ ಹಾಗೂ ಕುಟುಂಬ ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಿದರು. ಇಮ್ರಾನ್ ಬಂಧನ ಕುರಿತು ಗುಪ್ತಚರ ಮೂಲಗಳು ಅವರಿಗೆ ಮೊದಲೇ ಸುಳಿವು ನೀಡಿದ್ದವು.

ಪಾಕಿಸ್ತಾನೀ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್ ಜತೆ ಕೈಜೋಡಿಸುತ್ತಿರುವ ಅಮೆರಿಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಇಮ್ರಾನ್, ಮುಷರಪ್ ಅವರು ಭಯೋತ್ಪಾದನೆಯ ಹೋರಾಟದಲ್ಲಿ ತಮ್ಮ ಮಿತ್ರ ಎಂದು ಅಮೆರಿಕ ಭಾವಿಸಿದೆ. ಆದರೆ ಆತನನ್ನು ತಡೆಯದಿದ್ದರೆ ಅಪಾಯವಿದೆ ಎಂಬುದನ್ನು ಅವರು ಮನಗಾಣಬೇಕಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು
ಜಗತ್ತಿನ ಅತಿ ಎತ್ತರದ ಬುದ್ಧ ವಿಗ್ರಹ ದುರಸ್ತಿ
ಪಾಕ್: ಆಕ್ರಮಿತ ಪ್ರದೇಶ ಬಿಟ್ಟು ತೆರಳಿದ ಬಂಡುಕೋರರು
ಸಚಿವರಿಗೆ ಕ್ರಿಕೆಟ್ ವೀಸಾ ನಿರಾಕರಣೆ: ಪಾಕ್ ಪ್ರತಿಭಟನೆ
ಪ್ರಜಾಪ್ರಭುತ್ವ ಸ್ಥಾಪನೆಗೆ ಅಮೆರಿಕಾ ಒತ್ತಡ
ಬುದ್ಧನ ಐತಿಹಾಸಿಕ ಪ್ರತಿಮೆಗೆ ಕುತ್ತು
ಮುಷರ್ರಫ್‌ಗೆ ಸಮವಸ್ತ್ರ ತ್ಯಜಿಸಲು ಬುಷ್ ಸಲಹೆ