ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಪಾಕ್‌ನಲ್ಲಿ ಶೀಘ್ರವೇ ಚುನಾವಣೆ: ಕಸೂರಿ ಆಶಯ
ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಒತ್ತಡಗಳು ಹೆಚ್ಚುತ್ತಿರುವುದರ ನಡುವೆಯೂ, ಪಾಕಿಸ್ತಾನವು ದೇಶದ ಹಿತಾಸಕ್ತಿಯ ಆಧಾರದ ಮೇಲಿಂದ ತುರ್ತು ಪರಿಸ್ಥಿತಿಯಲ್ಲಿಯೇ ಸಾರ್ವಜನಿಕ ಚುನಾವಣೆಗಳನ್ನು ನಡೆಸಲಿದೆ ಎಂದು ಬ್ರಿಟನ್‌ ಹಾಗೂ ಜರ್ಮನಿ ರಾಷ್ಟ್ರಗಳಿಗೆ ಬುಧವಾರ ಮಾಹಿತಿ ನೀಡಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಖುರ್ಷಿದ ಮೆಹಮೂದ್ ಕಸೂರಿ ಅವರು ಬ್ರಿಟನ್‌ ವಿದೇಶಾಂಗ ಸಚಿವ ಡೇವಿಡ್ ಮಿಲಿಬಾಂಡ್ ಹಾಗೂ ಜರ್ಮನಿಯ ಫ್ರಾಂಕ್ ವಾಲ್ಟರ್ ಸ್ಟಿನ್‌ಮಿಯರ್ ಹಾಗೂ ಕಾಮನ್‌ವೆಲ್ತ್ ಪ್ರಧಾನ ಕಾರ್ಯದರ್ಶಿ ಡೋನಾಲ್ಡ್ ಮ್ಯಾಕ್‌ಕಿನನ್ ಅವರಿಗೆ ದೂರವಾಣಿ ಮೂಲಕ ಈ ಮಾಹಿತಿ ರವಾನೆ ಮಾಡಿದ್ದಾರೆ.

ನಿಗದಿತಯಂತೆ ಯಾವುದೇ ಬದಲಾವಣೆಯನ್ನೂ ಮಾಡದೆ, ಮುಕ್ತ ಹಾಗೂ ನ್ಯಾಯಯುತವಾದ ಚುನಾವಣೆಗಳನ್ನು ನಡೆಸಲು ಪಾಕ್ ಸರಕಾರವು ನಿರ್ಧರಿಸಿದೆ ಎಂದು ಕಸೂರಿ ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಪಾಕಿಸ್ತಾನದಲ್ಲಿನ ಪರಿಸ್ಥಿತಿ ಕುರಿತು ವಿವರಿಸಿದ ಅವರು, ದೇಶದ ಹಿತಾಸಕ್ತಿಗಾಗಿ ಚುನಾವಣೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಮತ್ತಷ್ಟು
ಬಂಧನ ಭೀತಿ: ತಲೆಮರೆಸಿಕೊಂಡಿರುವ ಇಮ್ರಾನ್
ಜಗತ್ತಿನ ಅತಿ ಎತ್ತರದ ಬುದ್ಧ ವಿಗ್ರಹ ದುರಸ್ತಿ
ಪಾಕ್: ಆಕ್ರಮಿತ ಪ್ರದೇಶ ಬಿಟ್ಟು ತೆರಳಿದ ಬಂಡುಕೋರರು
ಸಚಿವರಿಗೆ ಕ್ರಿಕೆಟ್ ವೀಸಾ ನಿರಾಕರಣೆ: ಪಾಕ್ ಪ್ರತಿಭಟನೆ
ಪ್ರಜಾಪ್ರಭುತ್ವ ಸ್ಥಾಪನೆಗೆ ಅಮೆರಿಕಾ ಒತ್ತಡ
ಬುದ್ಧನ ಐತಿಹಾಸಿಕ ಪ್ರತಿಮೆಗೆ ಕುತ್ತು